ಶಿಡ್ಲಘಟ್ಟ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಸಂಸ್ಥೆಯ ರಾಜ್ಯ ಪುರಸ್ಕಾರ ಪ್ರಶಸ್ತಿಗೆ ಶಿಡ್ಲಘಟ್ಟದ ಎಂಟು ಮಂದಿ ಬುಲ್‌ಬುಲ್ ಮತ್ತು ಸ್ಕೌಟ್ಸ್ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಸೋಮವಾರ ರಾಜಭವನದಲ್ಲಿ ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡಿದರು.
ಬಿಜಿಎಸ್ ಶಾಲೆಯ ಬುಲ್‌ಬುಲ್‌ಗಳಾದ ಪಿ.ಆಧ್ಯಗೌಡ, ಜಿ.ಎಸ್.ಸೌಹಾರ್ಧ, ವಿ.ವೆನ್ನಲ ಹಾಗೂ ಎ.ಪಿ.ಲಕ್ಷಿತ ಮತ್ತು ಸಿಜನ್ ಶಾಲೆಯ ಸ್ಕೌಟ್ಸ್‌ಗಳಾದ ಹರ್ಷಿತ, ಕಾರ್ತಿಕ್, ಮುಸ್ತಫ ಹಾಗೂ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಕೆ.ಎಸ್.ದುಶ್ಯಂತ್ ರಾಜ್ಯ ಪುರಸ್ಕಾರ ಪ್ರಶಸ್ತಿಗೆ ಪಾತ್ರರಾಗಿರುವರು.
ಜಿಲ್ಲೆಯಿಂದ ಒಟ್ಟು 20 ಬುಲ್‌ಬುಲ್ ಮತ್ತು ಸ್ಕೌಟ್ಸ್ ವಿದ್ಯಾರ್ಥಿಗಳು ರಾಜ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು ಈ ಪೈಕಿ ತಾಲ್ಲೂಕಿನ 8 ಬುಲ್‌ಬುಲ್, ಸ್ಕೌಟ್ಸ್ ಆಯ್ಕೆಯಾಗಿದ್ದರು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್ ಪ್ರದಾನ ಮಾಡಿದರು.
ರಾಜ್ಯ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಜಿಲ್ಲೆಯ ಇತರ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳಿಂದ ಪ್ರಶಸ್ತಿ ವಿತರಿಸಲಾಗುವುದು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಸಿ.ಬಿ.ಪ್ರಕಾಶ್ ತಿಳಿಸಿದ್ದಾರೆ.
ವಿಧಾನಸಭೆ ಸಭಾಪತಿ ಯು.ಟಿ.ಖಾದರ್, ರಾಜ್ಯ ಮುಖ್ಯಆಯುಕ್ತ ಪಿ.ಜಿ.ಆರ್. ಸಿಂಧ್ಯ, ಮುನಿ ಕೆಂಪೇಗೌಡ, ಸಿ.ಬಿ ಪ್ರಕಾಶ್, ಲಕ್ಷ್ಮಿ ಹೊನ್ನಪ್ಪನಾಯಕ್, ಕಬ್ಸ್, ಬುಲ್‌ಬುಲ್ಸ್, ಸ್ಕೌಟ್ಸ್, ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಪೋಷಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.