ADVERTISEMENT

ಕಾಟಾಚಾರದ ಪರಿಸರ ದಿನ ಆಚರಣೆ: ರೈತ ಸಂಘ ಆರೋಪ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 9:08 IST
Last Updated 6 ಜೂನ್ 2020, 9:08 IST
ಪ್ರತಿಭಟನೆಯಲ್ಲಿ ‌ಭಾಗವಹಿಸಿದ್ದ ರೈತ ಮುಖಂಡರು
ಪ್ರತಿಭಟನೆಯಲ್ಲಿ ‌ಭಾಗವಹಿಸಿದ್ದ ರೈತ ಮುಖಂಡರು   

ಗೌರಬಿದನೂರು: ತಾಲ್ಲೂಕು ಆಡಳಿತ, ಜನಪ್ರತಿನಧಿಗಳು ತೋರಿಕೆಗೆ ಪರಿಸರ ದಿನ ಆಚರಿಸುತ್ತಿದ್ದಾರೆ ಎಂದು ಆರೋಪಿಸಿದ ರೈತ ಸಂಘ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ನೈಸರ್ಗಿಕ‌ ಸಂಪನ್ಮೂಲ ಹಾಗೂ ಪರಿಸರ ಸಂರಕ್ಷಿಸುವಂತೆ ಅನೇಕ ಬಾರಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ತಾಲ್ಲೂಕು ಅಡಳಿತ ಕಾಟಚಾರಕ್ಕೆ ಆಚರಣೆ ಮಾಡುತ್ತಿದೆ ಎಂದು ದೂರಿದರು.

ನಾಮಗೊಂಡ್ಲು ಗ್ರಾಮದ ಗೋಕುಂಟೆ ಮತ್ತು ತರುಮರಿ, ಗೋಕಾಡು ಉಳಿಸಲು ಅದರಲ್ಲಿ ಕಟ್ಟಡ ಕಟ್ಟಲು ತಾಲ್ಲೂಕು ಆಡಳಿತ ಮುಂದಾಗಿದೆ. ಉತ್ತರ ಪಿನಾಕಿನಿ ನದಿಯಲ್ಲಿ ದಶಕಗಳಿಂದ ಮರಳು ಗಣಿಗಾರಿಕೆ ನಡೆಸಿ ಇದೀಗ ನದಿ ರಕ್ಷಿಸುವ ನೆಪದಲ್ಲಿ ಶಾಸಕರು ಬಿದಿರಿನ ನಾರು ನೆಡುತ್ತಿರುವುದನ್ನು ತೋರಿಕೆಗಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಸಂಘದ ತಾಲ್ಲೂಕು ಅಧ್ಯಕ್ಷ ಗುಂಡಾಪುರ ಲೋಕೇಶ್‍ಗೌಡ ಮಾತನಾಡಿ, ಮಹಾತ್ಮರ ಹೆಸರಲ್ಲಿ ಕೆರೆ ಗೋಕುಂಟೆಗಳನ್ನು ಆಕ್ರಮಿಸಿಕೊಂಡು ಭವನಗಳನ್ನು ನಿರ್ಮಿಸಿಸುವುದು ನಿಲ್ಲಸಬೇಕು. ಭವನಗಳನ್ನು ಸರ್ಕಾರಿ ಜಾಗದಲ್ಲಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅಶ್ವತ್ಥಗೌಡ, ಆದಿನಾರಾಯಣಪ್ಪ, ನರಸಿಂಹರೆಡ್ಡಿ, ಜಯಣ್ಣ, ವೆಂಕಟೇಶ್, ಸನತ್‍ಕುಮಾರ್ ಬಾಬು, ನಂದರೆಡ್ಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.