ADVERTISEMENT

ಆಸ್ಪತ್ರೆ ಮೇಲ್ಛಾವಣೆ ಗಾರೆ ಕುಸಿತ

ಚುಚ್ಚುಮದ್ದು ಹಾಕುವ ವೇಳೆ ಘಟನೆ: ಒಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 4:14 IST
Last Updated 15 ಸೆಪ್ಟೆಂಬರ್ 2022, 4:14 IST
ತಾಲ್ಲೂಕು ಉಲ್ಲೋಡು ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು
ತಾಲ್ಲೂಕು ಉಲ್ಲೋಡು ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು   

ಗುಡಿಬಂಡೆ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳಿಗೆ ಚುಚ್ಚುಮದ್ದು ಹಾಕುವ ವೇಳೆ ಮೇಲ್ಛಾವಣೆ ಕುಸಿದು ಆಶಾ ಕಾರ್ಯಕರ್ತೆ ತಲೆಗೆ ಪೆಟ್ಟಾಗಿದೆ. ಅದೃಷ್ಟಾವಶಾತ್ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಉಲ್ಲೋಡು ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳಿಗೆ ಚುಚ್ಚುಮದ್ದು ಹಾಕುವ ಸಂದರ್ಭದಲ್ಲಿ ಕಟ್ಟಡದ ಮೇಲ್ಛಾವಣೆ ಗಾರೆ ಕುಸಿದು ಅಲ್ಲಿದ್ದ ಆಶಾ ಕಾರ್ಯಕರ್ತೆಯ ತೆಲೆಮೇಲೆಬಿದಿದೆ. ಗಾಯಗೊಂಡ ಆಶಾಕಾರ್ಯಕರ್ತೆಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕಟ್ಟಡ 60 ವರ್ಷ ಹಳೆಯದಾಗಿದ್ದು, ಎರಡು ವರ್ಷಗಳಿಂದ ಸಿಬ್ಬಂದಿ ಕೊರತೆಯಿಂದ ಕೆಲಸ
ನಿರ್ವಹಿಸುತ್ತಿರಲಿಲ್ಲ. ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಶಾಸಕ ಸುಬ್ಬಾರೆಡ್ಡಿ ತಾಲೂಕು ಆರೋಗ್ಯಾಧಿಕಾರಿಗಳ ಮೇಲೆ ಗರಂ ಆದ ಬಳಿಕ ಈ ಕೇಂದ್ರಕ್ಕೆಸಿಬ್ಬಂದಿ
ನಿಯೋಜಿಸಲಾಗಿತ್ತು.‌‌

ADVERTISEMENT

ಸ್ಥಳಕ್ಕೆ ಜಿ.ಪಂ ಎಇಇ ರಘುನಾಥಮೂರ್ತಿ ವೈದ್ಯಾಧಿಕಾರಿ ಡಾ.ಅಕ್ಷಯ್ಯ, ಪಿಡಿಒ ಶ್ರೀನಿವಾಸ್ ಬೇಟಿ ನೀಡಿ ಪರಿಶೀಲನೆ ಮಾಡಿದರು.

‘ಕಳಪೆ ಕಾಮಗಾರಿ:
ಕಳೆದ ವರ್ಷ ಪ್ರಾಥಮಿಕ ಆರೋಗ್ಯ ಕೇಂದ್ರ ದುರಸ್ತಿಗಾಗಿ ಮೂರು ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದ್ದರೂ ಕಳಪೆ ಕಾಮಗಾರಿಯಿಂದ ಮೇಲ್ಛಾವಣೆ ಕುಸಿದಿದೆ ಎಂದು ಸ್ಥಳೀಯರ ಆರೋಪ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.