ಗೂಳೂರು (ಬಾಗೇಪಲ್ಲಿ): ತಾಲ್ಲೂಕಿನ ಕಮ್ಮರವಾರಿಪಲ್ಲಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ಆಗಿ ಬೆಂಕಿ ಹೊತ್ತಿಕೊಂಡು 48 ಕುರಿಗಳು ಮೃತಪಟ್ಟಿವೆ.
‘ಒಂದು ಕುರಿ ₹10 ಸಾವಿರ ಮೌಲ್ಯದಾಗಿದ್ದು, 48 ಕುರಿಗಳ ಸಾವಿನಿಂದ ನನಗೆ ₹4.8 ಲಕ್ಷ ನಷ್ಟವಾಗಿದೆ’ ಎಂದು ರೈತ ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕಿನ ತಿಮ್ಮಂಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮ್ಮರವಾರಿಪಲ್ಲಿ ಗ್ರಾಮದ ರೈತ ಮಂಜುನಾಥ್ 70ಕ್ಕೂ ಹೆಚ್ಚು ಕುರಿಗಳನ್ನು ಸಾಕಿದ್ದಾರೆ. ಶನಿವಾರ ಸಂಜೆ ಗ್ರಾಮದಲ್ಲಿನ ತಮ್ಮ ಕುರಿಗಳ ಹಟ್ಟಿಗೆ ಕುರಿಗಳನ್ನು ಬಿಟ್ಟಿದ್ದರು. ಈ ವೇಳೆ ಮನೆ ಟಿ.ವಿ.ಯಲ್ಲಿ ಶಾರ್ಟ್ ಸರ್ಕಿಟ್ ಉಂಟಾಗಿದ್ದು, ಬೆಂಕಿಯ ಕಿಡಿ ಮನೆಯ ಪಕ್ಕದ ಕುರಿಗಳ ಹಟ್ಟಿ ಮೇಲೆ ಬಿದ್ದಿದ್ದು, 48 ಕುರಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬೆಸ್ಕಾಂ ಅಧಿಕಾರಿ ಹರೀಶ್, ಸ್ಥಳ ಪರಿಶೀಲನೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.