ADVERTISEMENT

ಗುರುಪೂಜಾ ಸಂಗೀತ ಮಹೋತ್ಸವಕ್ಕೆ ತೆರೆ

72 ಗಂಟೆಯ ನಿರಂತರ ನಿನಾದಕ್ಕೆ ಮನಸೋತ ಜನ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 4:03 IST
Last Updated 12 ಜುಲೈ 2025, 4:03 IST
ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿನ ಸಂಗೀತೋತ್ಸವದಲ್ಲಿ ಗುರುವಾರ ರಾತ್ರಿ ಮೈಸೂರು ಮಂಜುನಾಥ್‌ ಮತ್ತು ನಾಗರಾಜ್‌ ತಂಡದ ಪಿಟೀಲು ಕಛೇರಿ 
ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿನ ಸಂಗೀತೋತ್ಸವದಲ್ಲಿ ಗುರುವಾರ ರಾತ್ರಿ ಮೈಸೂರು ಮಂಜುನಾಥ್‌ ಮತ್ತು ನಾಗರಾಜ್‌ ತಂಡದ ಪಿಟೀಲು ಕಛೇರಿ    

ಚಿಂತಾಮಣಿ: ಮೂಲ ದಿನಗಳ ಸಂಗೀತ ರಸದೌತಣ ಉಣಬಡಿಸಿದ ಗುರುಪೂಜಾ ಸಂಗೀತಮಹೋತ್ಸವಕ್ಕೆ ಶುಕ್ರವಾರ ತೆರೆ ಬಿದ್ದಿತು.

ಕೈವಾರದ ಯೋಗಿನಾರೇಯಣ ಮಠದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಸಂಗೀತ ಉತ್ಸವ ಬೆಳಗ್ಗೆ 6 ಗಂಟೆಗೆ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಂ ನೇತೃತ್ವದಲ್ಲಿ ಸಂಕೀರ್ತನೆಯೊಂದಿಗೆ ಮುಕ್ತಾಯಗೊಂಡಿತು.

ಮೂರು ದಿನ ಕೀರ್ತನೆಗಳ ರಾಗ ಆಲಿಸಿದ ಮುದ ಗೊಂಡಿದ್ದ ಸಂಗೀತಪ್ರಿಯರು ಮತ್ತು ಭಕ್ತರು ತಮ್ಮ ತಮ್ಮ ಊರುಗಳತ್ತ ಮುಖ ಮಾಡಿದರು.

ADVERTISEMENT

ಪ್ರತಿನಿತ್ಯ ರಾತ್ರಿ ಅನೇಕ ಹರಿಕಥೆ ದಾಸರು ಹರಿಕಥೆಗಳನ್ನು ನಡೆಸಿಕೊಟ್ಟರು. ಶಾಸ್ತ್ರೀಯ ಸಂಗೀತ, ಭರತನಾಟ್ಯ, ವೀಣಾವಾದನ, ನಾದಸ್ವರ, ಹರಿಕಥೆ, ಬುರ್ರಕಥೆ ಮತ್ತು ಭಜನಾ ತಂಡಗಳು ಕಲಾವಿದರು ತಮ್ಮ ಕಲೆಯನ್ನು ಗುರುವಿಗೆ ಸಮರ್ಪಿಸಿದರು. ಗ್ರಾಮೀಣ ಭಾಗಗಳ ಮಹಿಳಾ ತಂಡಗಳು ಭಜನೆ, ಕೀರ್ತನೆಗಳ ಗಾಯನ, ಕೋಲಾಟ, ಚಕ್ಕಲಭಜನೆ, ನೃತ್ಯದ ಮೂಲಕ

3-4 ದಿನಗಳಿಂದ ಜನ ಸಾಗರದಿಂದ ತುಂಬಿದ್ದ ಕೈವಾರ ಶುಕ್ರವಾರ ಖಾಲಿಯಾಗಿ ಬಿಕೋ ಎನ್ನುತ್ತಿತ್ತು. ಗ್ರಾಮದ ಮೂಲೆ ಮೂಲೆಗಳಲ್ಲಿ ಮಾರ್ಧನಿಸಿದ್ದ ಸಂಗೀತಲಹರಿ ಈಗ ಮೌನ ರಾಗ ಹಾಡಿತು.

ಸಂಗೀತೋತ್ಸವದ ಯಶಸ್ವಿಗಾಗಿ ಅಹರ್ನಿಶಿ ದುಡಿದ ಶ್ರಮಜೀವಿಗಳಿಗೆ ಸಂಘಟಕರಿಗೆ ಭಕ್ತರು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ ತಮ್ಮ ತಮ್ಮ ಸ್ಥಳಗಳಿಗೆ ತೆರಳಿದರು.

ಹಗಲು ರಾತ್ರಿ ಎನ್ನದೆ 72 ಗಂಟೆಗಳ ಕಾಲ ಅಚ್ಚುಕಟ್ಟಾಗಿ ನಡೆದ ಸಂಗೀತೋತ್ಸವದ ನೆನಪು ಸದಾ ಸಂಗೀತಪ್ರಿಯರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಸಂಗೀತ ಗುಂಗಿನಲ್ಲೇ ತಮ್ಮ ತಮ್ಮ ಊರುಗಳ ಕಡೆ ಹೆಜ್ಜೆಹಾಕಿದರು. ಮುಂದಿನ ವರ್ಷಕ್ಕೆ ಮತ್ತೆ ಕಾದಿರುತ್ತೇವೆ ಎಂದು ಭಕ್ತೆ ಸರಸ್ವತಮ್ಮ ತಿಳಿಸಿದರು.

ಪ್ರತಿನಿತ್ಯ ಲಕ್ಷಾಂತರ ಜನರು ಭಾಗವಹಿಸಿದ್ದರೂ ಯಾವುದೇ ಗೊಂದಲ, ಅವ್ಯವಸ್ಥೆ ಆಗದಂತೆ ಮಠದ ಆಡಳಿತ ಮಂಡಳಿ ವ್ಯವಸ್ಥೆ ಮಾಡಿತ್ತು.

ಬೆಂಗಳೂರಿನ ನೂಪುರ ಫೈನ್ ಆರ್ಟ್ಸ್ ರೂಪಾರಾಜೇಶ್ ತಂಡದ ಭರತನಾಟ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.