ಬಾಗೇಪಲ್ಲಿ: ಪಟ್ಟಣದ ಹಳೆ ಶಾದಿ ಮಹಲ್ ಮುಂದೆ ನಿರ್ಮಿಸಲಾಗಿರುವ ‘ಶಾ ಹ್ಯಾಪಿನೆಸ್ ಅರ್ಜೆಂಟ್ ಕೇರ್ ಸಾಯಿ ಸ್ವಾಸ್ಥ್ಯ ವೆಲ್‍ನೆಸ್ ಸೆಂಟರ್’ ಅನ್ನು ಮುದ್ದೇನಹಳ್ಳಿಯ ಸದ್ಗುರು ಮಧುಸೂದನ ಸಾಯಿ ಸೋಮವಾರ ಲೋಕಾರ್ಪಣೆ ಮಾಡಿದರು.
‘ಒಂದು ಜಗತ್ತು ಒಂದು ಕುಟುಂಬ’ ಪ್ರತಿಷ್ಠಾನವು ಕ್ಯಾಲಿಫೋರ್ನಿಯಾ ಮೂಲದ ದತ್ತಿ ಸಂಸ್ಥೆ ‘ಶಾ ಹ್ಯಾಪಿನೆಸ್ ಫೌಂಡೇಷನ್ ಹಾಗೂ ಸರ್ವಮಂಗಳ್ ಕುಟುಂಬ ದತ್ತಿ’ ಸಹಯೋಗದಲ್ಲಿ ಈ ಕೇಂದ್ರವು ಲೋಕಾರ್ಪಣೆ ಆಗಿದೆ. ಮಧುಸೂದನ ಸಾಯಿ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯು ಈ ಆರೋಗ್ಯ ಕೇಂದ್ರ ನಿರ್ವಹಿಸಲಿದೆ.
ಮಧುಸೂದನ ಸಾಯಿ ಮಾತನಾಡಿ, ‘ಅನಾರೋಗ್ಯ ಸಮಸ್ಯೆಗಳಿಗೆ ತುರ್ತು ಸೇವೆ, ಪ್ರಥಮ ಚಿಕಿತ್ಸೆ ಹಾಗೂ ತುರ್ತುಸಾಮಾನ್ಯ ಸೇವೆ, ಎಕ್ಸ್‍ರೇ, ಪ್ರಯೋಗಾಲಯ ಮತ್ತು ಅಪ್ಟೋಮೆಟ್ರಿ ಘಟಕ, ಸೇರಿದಂತೆ ಡಯೋಗ್ನಸ್ಟಿಕ್ ಸೌಲಭ್ಯಗಳು ಕಾರ್ಯನಿರ್ವಹಿಸಲಿವೆ. ಮಧುಸೂದನಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಾರ್ಡಿಯಾಲಜಿ ಮತ್ತು ಕಾರ್ಡಿಯೋಧೋರಾಸಿಕ್ ಸರ್ಜಿ, ಅರ್ಥೊಪೆಡಿಕ್ಸ್, ಪ್ರಸೂತಿ ಮತ್ತು ಸ್ತ್ರೀರೋಗ, ಜನರಲ್ ಸರ್ಜರಿ, ಜನರಲ್ ಮೆಡಿಸಿನ್, ಪೀಡಿಯಾಟ್ರಿಕ್ಸ್, ನೇತ್ರವಿಜ್ಞಾನ ಹಾಗೂ ಇಎನ್‍ಟಿ ಮುಂತಾದ ವಿಭಾಗಗಳು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿತ ರೋಗಗಳ ನಿರ್ವಹಣೆ ಮಾಡಲಿವೆ ಎಂದರು.
ಅಮೆರಿಕಾದ ಹ್ಯಾಪಿನೆಸ್ ಫೌಂಡೇಷನ್ ಸಂಸ್ಥಾಪಕ ಮನು ಷಾ ಅವರು ಫೌಂಡೇಷನ್‍ನ ಸದಸ್ಯರ ಜೊತೆ ಅಮೆರಿಕದಿಂದಲೇ ಆನ್‍ಲೈನ್ ಮೂಲಕ ಆರೋಗ್ಯ ಕೇಂದ್ರದ ಲೋಕಾರ್ಪಣೆ ವೀಕ್ಷಿಸಿದರು.
ಮನುಭಾವಿ ಶಾ, ಡಾ.ನಿತಿನ್‍ಬಾಯಿ ಶಾ, ಎಂಎಸ್‍ಐ ಸರ್ವೀಸಸ್‍ನ ಅಧ್ಯಕ್ಷ ಜೀವನ್‍ಭಟ್, ಮುಸಾಬ್ ಆಲಂ, ಡಾ.ಸತೀಶ್‍ಬಾಬು, ಗೋವಿಂದರೆಡ್ಡಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ಸುಜಾತಾನಾಯ್ಡು, ಬಿ.ಆರ್.ನರಸಿಂಹನಾಯ್ಡು, ಶ್ರೀನಿವಾಸರೆಡ್ಡಿ, ಪ್ರೊ.ಎನ್.ನಂಜುಂಡಪ್ಪ, ಎ.ಜಿ.ಸುಧಾಕರ್, ಎಲ್‍ಐಸಿರಾಮಚಂದ್ರ, ಸಂಸ್ಥೆ ವೈದ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.