ADVERTISEMENT

ಚಿಕ್ಕಬಳ್ಳಾಪುರ: ಭಾರಿ ಮಳೆ: ಕೆರೆ, ಕಟ್ಟೆಗಳಿಗೆ ನೀರು, ತಗ್ಗು ಪ್ರದೇಶ ಜಲಾವೃತ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 4:08 IST
Last Updated 24 ಅಕ್ಟೋಬರ್ 2021, 4:08 IST
ಚಿಕ್ಕಬಳ್ಳಾಪುರ ಮಹಿಳಾ ಸರ್ಕಾರಿ ಪದವಿ ಕಾಲೇಜಿನ ಸುತ್ತನೀರು ನಿಂತಿರುವುದು.
ಚಿಕ್ಕಬಳ್ಳಾಪುರ ಮಹಿಳಾ ಸರ್ಕಾರಿ ಪದವಿ ಕಾಲೇಜಿನ ಸುತ್ತನೀರು ನಿಂತಿರುವುದು.   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶನಿವಾರ ನಡುರಾತ್ರಿಯಿಂದ ಭಾನುವಾರ ಬೆಳಗಿನ ಜಾವದವರೆಗೆ ಭಾರಿ ಮಳೆ ಸುರಿದಿದೆ.

ಜಿಲ್ಲೆಯಲ್ಲಿ ಬಹಳಷ್ಟು ಕೆರೆಗಳು ತುಂಬಿವೆ.

ಚಿಕ್ಕಬಳ್ಳಾಪುರ ನಗರದ ಜಗಜೀವನರಾಂ ಬಡಾವಣೆ ಸೇರಿದಂತೆ ಬಹಳಷ್ಟು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.

ADVERTISEMENT

ಪ್ರತಿಷ್ಠಿತ ಡಿವೈನ್ ಸಿಟಿ ಕೆರೆಯಂತೆ ಆಗಿದೆ. ಈ ಬಡಾವಣೆಯ ರಸ್ತೆಗಳಲ್ಲಿ, ಮೋರಿಗಳಲ್ಲಿ ಮಳೆ ನೀರು ತುಂಬಿ ತುಳುಕುತ್ತಿದೆ.

ದೊಡ್ಡಪೈಲಗುರ್ಕಿ, ಕಣಿತಹಳ್ಳಿ, ಅಗಲಗುರ್ಕಿ ಸೇರಿದಂತೆ ಹೊಲ ತೋಟಗಳಲ್ಲಿ ಹೇರಳವಾಗಿ ನೀರು ನಿಂತಿದೆ.

ಶಿಡ್ಲಘಟ್ಟ ತಾಲ್ಲೂಕಿನ ರಾಮಸಮುದ್ರ ಕೆರೆ, ತಲಕಾಯಲಬೆಟ್ಟದ ವೆಂಕಟೇಶ್ವರ ಸಾಗರ ತುಂಬಿ ಕೋಡಿ ಹರಿಯುತ್ತಿದೆ.

ಗೌರಿಬಿದನೂರು ತಾಲ್ಲೂಕಿನಲ್ಲಿ ಉತ್ತರ ಪಿನಾಕಿನಿ ಮತ್ತೆ ಮೈದುಂಬಿ ಹರಿಯುತ್ತಿದೆ. ಒಂದು ವಾರದಿಂದ ನದಿಯ ಹರಿವು ತಗ್ಗಿತ್ತು.
ಮಂಚೇನಹಳ್ಳಿ ಭಾಗದ ಕೆರೆಗಳು ಭರ್ತಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.