
ಶಿಡ್ಲಘಟ್ಟ: ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯಿತಿ ಎನ್ಎಆರ್‌ಎಲ್ಎಂ ಕಟ್ಟಡ, ಹೈಮಾಸ್ಟ್ ದೀಪಗಳು, ಊರಿನ ದೇವಾಲಯದ ಬಳಿಯ ಉದ್ಯಾನವನ್ನು ಸೋಮವಾರ ಲೋಕಾರ್ಪಣೆ ಮಾಡಲಾಯಿತು.
ದೇವರಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರ ದೇವರಾಜ್ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಜನಸಾಮಾನ್ಯರಿಗೆ ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿದೀಪದ ಸೌಲಭ್ಯ ನೀಡಿ, ಸ್ವಚ್ಛತೆ ಕಾಪಾಡುವುದು ಸರ್ಕಾರದ ಜವಾಬ್ದಾರಿ’ ಎಂದರು.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಯತ್ನ ಮಾಡಬೇಕು. ನಮ್ಮದು ಕೃಷಿ ಪ್ರಧಾನ ದೇಶ ಮತ್ತು ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಗಳ ಮೇಲೆ ದೇಶದ ಆರ್ಥಿಕತೆ ಅವಲಂಬಿತವಾಗಿದೆ. ಸರ್ಕಾರವು ಗ್ರಾಮಗಳ ಅಭಿವೃದ್ಧಿ ಮತ್ತು ಗ್ರಾಮೀಣ ಭಾಗದ ಜನರ ಜೀವನ ಮಟ್ಟ ಸುಧಾರಿಸಲು ಅನೇಕ ಯೋಜನೆಗಳನ್ನು ರೂಪಿಸಿದೆ ಎಂದರು.
ಎನ್.ಆರ್.ಎಲ್.ಎಂ ಕಟ್ಟಡ, ಪಾರ್ಕ್ ಭಾರತ್ ನಿರ್ಮಾಣ ರಾಜೀವ್‌ಗಾಂಧಿ ಸೇವಾ ಕೇಂದ್ರ ಕಟ್ಟಡ ಉದ್ಘಾಟಿಸಲಾಯಿತು.
ಉಪಾಧ್ಯಕ್ಷೆ ಅನಸೂಯಮ್ಮ, ಸದಸ್ಯರಾದ ಸುಗುಣಮ್ಮ ವೆಂಕಟೇಶ್ (ಚಕ್ರವರ್ತಿ), ಲಕ್ಷ್ಮಿ, ಮುನಿರಾಜಪ್ಪ, ಕೆಂಪೇಗೌಡ, ನಳಿನ, ಜಗದೀಶ್, ಶಿವಣ್ಣ, ರತ್ನಮ್ಮದ್ಯಾವಪ್ಪ, ವೀರಾಪುರ ಡಿ.ವೆಂಕಟೇಶ್, ಲಕ್ಷ್ಮಿ, ಸುಶೀಲಮ್ಮ, ವೆಂಕಟರೋಣಪ್ಪ, ಪಿ.ವೆಂಕಟಪ್ಪ, ಪಿಡಿಒ ಅಬೂಬಕರ್ ಸಿದ್ದಿಕ್, ಕಾರ್ಯದರ್ಶಿ ಟಿ.ಎಂ.ಆಶ್ವತ್ಥಪ್ಪ, ದ್ಯಾವಪ್ಪ, ಸಿಬ್ಬಂದಿ, ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.