ADVERTISEMENT

ಕೋಚಿಮುಲ್ | 90 ದಿನಗಳ ಒಳಗೆ ಚುನಾವಣೆಗೆ ಆದೇಶ: ಕೆ.ವಿ.ನಾಗರಾಜ್

​ಪ್ರಜಾವಾಣಿ ವಾರ್ತೆ
Published 17 ಜುಲೈ 2024, 15:33 IST
Last Updated 17 ಜುಲೈ 2024, 15:33 IST
ಕೆ.ವಿ.ನಾಗರಾಜ್
ಕೆ.ವಿ.ನಾಗರಾಜ್   

ಚಿಕ್ಕಬಳ್ಳಾಪುರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಕೋಚಿಮುಲ್) ಆಡಳಿತ ಮಂಡಳಿ ರಚನೆಗೆ 90 ದಿನಗಳ ಒಳಗಾಗಿ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ ಎಂದು ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ತಿಳಿಸಿದ್ದಾರೆ.

ಹಾಲು ಒಕ್ಕೂಟದ ಆಡಳಿತ ಮಂಡಳಿ ಅವಧಿಯು2024ರ ಮೇ 12ಕ್ಕೆ ಮುಕ್ತಾಯವಾಗಿದೆ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಪ್ರಯುಕ್ತ ಚುನಾವಣೆಯನ್ನು ಜೂ.6ರವರೆಗೆ ಮುಂದೂಡಲಾಗಿತ್ತು. ನಂತರವೂ ಒಕ್ಕೂಟದ ಚುನಾವಣೆ ಪ್ರಕ್ರಿಯೆ ನಡೆಸಲಿಲ್ಲ. ಈ ಬಗ್ಗೆ ಹೈಕೋರ್ಟ್‌ಗೆ ದಾವೆ ಹೂಡಲಾಗಿತ್ತು. ಜು.17ರಂದು ನ್ಯಾಯಾಲಯವು ಈ ಸಂಬಂಧ ಆದೇಶ ನೀಡಿದೆ ಎಂದಿದ್ದಾರೆ.

ಜೂ.6ಕ್ಕೆ ಚುನಾವಣಾ ಪ್ರಕ್ರಿಯೆ ಯಾವ ಹಂತದಲ್ಲಿ ನಿಂತಿತ್ತೊ ಅಲ್ಲಿಂದಲೇ ಮುಂದುವರಿಸಲು ಆದೇಶಿಸಿದೆ. ಒಕ್ಕೂಟದಲ್ಲಿ ಕರಡು ಅರ್ಹ ಮತದಾರರ ಪಟ್ಟಿ ಬಿಡುಗಡೆ ಮಾಡಿ ಸಂಘಗಳಿಂದ ಡೆಲಿಗೇಟ್‍ಗಳನ್ನು ನಿಯೋಜಿಸಿತ್ತು. ಅವರುಗಳನ್ನು ಪರಿಗಣಿಸಲು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ. ಒಕ್ಕೂಟದ ಪ್ರಸ್ತುತ ಆಡಳಿತ ಮಂಡಳಿ ಯಾವುದೇ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವಂತಿಲ್ಲ. ಅಂದರೆ ಆಡಳಿತಾತ್ಮಕ ಹಾಗೂ ಆರ್ಥಿಕ ನಿರ್ಣಯಗಳನ್ನು ಕೈಗೊಳ್ಳದಿರಲೂ ಆದೇಶಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.