ADVERTISEMENT

ವರ್ಷತೊಡಕು: ಮಾಂಸ ಖರೀದಿಗೆ ಮುಗಿಬಿದ್ದ ಜನರು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2024, 13:44 IST
Last Updated 10 ಏಪ್ರಿಲ್ 2024, 13:44 IST
ಸಾದಲಿ ಹೋಬಳಿಯ ದಿಬ್ಬೂರಹಳ್ಳಿ ರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ವರ್ಷತೊಡಕು ಪ್ರಯುಕ್ತ ಮಾಂಸ ಖರೀದಿಗೆ ಜನ ಬಂದಿದ್ದರು.
ಸಾದಲಿ ಹೋಬಳಿಯ ದಿಬ್ಬೂರಹಳ್ಳಿ ರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ವರ್ಷತೊಡಕು ಪ್ರಯುಕ್ತ ಮಾಂಸ ಖರೀದಿಗೆ ಜನ ಬಂದಿದ್ದರು.   

ಸಾದಲಿ: ಪಟ್ಟಣದಲ್ಲಿ ಬುಧವಾರ ಯುಗಾದಿ ವರ್ಷತೊಡಕು ಪ್ರಯುಕ್ತ ಮಾಂಸ ಖರೀದಿ ಜೋರಾಗಿ ನಡೆಯಿತು. ಸ್ಥಳೀಯರು ಹಾಗೂ ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ರಣ ಬಿಸಿಲನ್ನು ಲೆಕ್ಕಿಸದೆ ಮುಗಿಬಿದ್ದು ಮಾಂಸ ಖರೀದಿಸಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಫಾರಂ ಕೋಳಿ ಮಾಂಸದ ಬೆಲೆ ಇಳಿಕೆಯಾಗಿತ್ತು. ಕೆಜಿಯೊಂದಕ್ಕೆ ₹ 250ರಂತೆ ಮಾರಾಟ ಮಾಡಲಾಯಿತು. ಆದರೆ ಕುರಿ ಮಾಂಸದ ಬೆಲೆ ಮಾತ್ರ ಗಗನಕ್ಕೇರಿತ್ತು. ಕೆಜಿಯೊಂದಕ್ಕೆ ₹ 550ರಂತೆ ಮಾರಾಟವಾಗುತ್ತಿದ್ದ ಕುರಿ ಮಾಂಸ, ₹ 650ರಂತೆ ಮಾರಾಟವಾಯಿತು. ನಾಟಿ ಕೋಳಿ ಬೆಲೆ ಕೆಜಿಯೊಂದಕ್ಕೆ ₹ 500ರ ಗಡಿ ದಾಟಿತ್ತು. ಹಂದಿ ಮಾಂಸದ ಬೆಲೆಯಲ್ಲೂ ಏರಿಕೆ ಕಂಡುಬಂದಿತು.

ಒಂದೆಡೆ ಬಿಸಿಲಿನ ಬೇಗೆ ಮತ್ತೊಂದೆಡೆ ಬೆಲೆ ಏರಿಕೆ ಇದ್ಯಾವುದನ್ನು ಗ್ರಾಹಕರು ಬೇಸರಿಸದೆ ಮಾಂಸ ಖರೀದಿ ಮಾಡಿದರು. ಕುರಿ ತಲೆ, ಕಾಲು ಹಾಗೂ ಹೊಟ್ಟೆ ಖರೀದಿಯೂ ಜೋರಾಗಿ ನಡೆಯಿತು. ತಲೆ, ಕಾಲು ಸುಟ್ಟುಕೊಡುವ ಹಾಗೂ ಸ್ವಚ್ಛಗೊಳಿಸಿ ಕತ್ತರಿಸಿಕೊಡುವ ಕೇಂದ್ರಗಳು ತಲೆಯೆತ್ತಿದ್ದವು.

ADVERTISEMENT

ಇನ್ನು ಸಾರು ತಯಾರಿಕೆಯಲ್ಲಿ ಬಳಸುವ ಪುದೀನ ಹಾಗೂ ಕೊತ್ತಂಬರಿ ಸೊಪ್ಪಿನ ಬೆಲೆಯೂ ಗಗನಮುಖಿಯಾಗಿತ್ತು. ನಂಜಿಕೊಳ್ಳಲು ಬಳಸುವ ಸೌತೆಕಾಯಿ ಬೆಲೆಯಲ್ಲಿ ಗಣನೀಯ ಏರಿಕೆಯಾಗಿತ್ತು.

ಗ್ರಾಮೀಣ ಪ್ರದೇಶದಲ್ಲಿ ವರ್ಷತೊಡಕು ಚೀಟಿ ಹಾಕಿದ್ದವರು, ಹಬ್ಬಕ್ಕೆ ಮೊದಲೇ ಕುರಿ ಹಾಗೂ ಹಂದಿಗಳನ್ನು ಖರೀದಿಸಿ ತಂದಿದ್ದರು. ಬುಧವಾರ ಬೆಳಗಾಗುವುದರೊಳಗೆ ಕೊಯ್ದು ಮಾಂಸ ಹಂಚಿಕೊಂಡು ಮನೆಗಳಿಗೆ ಕೊಂಡೊಯ್ದರು.

ಸಾದಲಿ ಹೋಬಳಿಯ ದಿಬ್ಬೂರಹಳ್ಳಿ ರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ವರ್ಷತೊಡಕು ಪ್ರಯುಕ್ತ ಮಾಂಸ ಖರೀದಿಗೆ ಜನ ಬಂದಿದ್ದರು.
ಸಾದಲಿ ಹೋಬಳಿಯ ದಿಬ್ಬೂರಹಳ್ಳಿ ರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ವರ್ಷತೊಡಕು ಪ್ರಯುಕ್ತ ಮಾಂಸ ಖರೀದಿಗೆ ಜನ ಬಂದಿದ್ದರು.
ಸಾದಲಿ ಹೋಬಳಿಯ ದಿಬ್ಬೂರಹಳ್ಳಿ ರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ವರ್ಷತೊಡಕು ಪ್ರಯುಕ್ತ ಮಾಂಸ ಖರೀದಿಗೆ ಜನ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.