ADVERTISEMENT

ಕೊರಟಗೆರೆ | ಆಟೊ ವ್ಹೀಲಿ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 13:55 IST
Last Updated 15 ಜೂನ್ 2025, 13:55 IST
ಆಟೊ ವ್ಹೀಲಿ ಮಾಡುತ್ತಿದ್ದ ಸಂತೋಷ್ ಜೊತೆ ಆಟೊ ಜಪ್ತಿ ಮಾಡಿರುವುದು
ಆಟೊ ವ್ಹೀಲಿ ಮಾಡುತ್ತಿದ್ದ ಸಂತೋಷ್ ಜೊತೆ ಆಟೊ ಜಪ್ತಿ ಮಾಡಿರುವುದು   

ಕೊರಟಗೆರೆ: ಪಟ್ಟಣದ ಮುಖ್ಯ ರಸ್ತೆಯಲ್ಲಿ ಶನಿವಾರ ರಾತ್ರಿ ಆಟೊ ವ್ಹೀಲಿ ಮಾಡಿಕೊಂಡು ಅಡ್ಡಾದಿಡ್ಡಿ ಚಲಾಯಿಸುತ್ತಿದ್ದ ಚಾಲಕ ಸಂತೋಷ್‌ನನ್ನು ಕೊರಟಗೆರೆ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.

ಮುಖ್ಯರಸ್ತೆಯಲ್ಲಿ ಆಟೊವನ್ನು ವ್ಹೀಲಿ ಮಾಡುವುದನ್ನು ಸಾರ್ವಜನಿಕರು ವಿಡಿಯೊ ಚಿತ್ರಿಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಪಿಎಸ್ಐ ವೈ.ಜಿ.ತೀರ್ಥೇಶ್ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ವಾಹನದ ಸಮೇತ ಬಂಧಿಸಿದ್ದಾರೆ. ಆಟೊ ಜಪ್ತಿ ಮಾಡಲಾಗಿದೆ.

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ದ್ವಿಚಕ್ರ, ಆಟೊ ವ್ಹೀಲಿ ಮಾಡುವುದು, ಕರ್ಕಶ ಧ್ವನಿ ಮಾಡಿಕೊಂಡು ಓಡಾಡುವುದು ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವುದು ಕಂಡುಬಂದಲ್ಲಿ ಕ್ರಮವಹಿಸುವುದರೊಂದಿಗೆ ವಾಹನವನ್ನು ಜಪ್ತಿ ಮಾಡಿಕೊಳ್ಳುವುದಾಗಿ ಪಿಎಸ್ಐ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.