
ಪ್ರಜಾವಾಣಿ ವಾರ್ತೆ
ಚಿಂತಾಮಣಿ: ಕೈವಾರದಲ್ಲಿ ಶನಿವಾರ ಕುಮಾರ ಷಷ್ಠಿಯನ್ನು ಭಕ್ತಿಯಿಂದ ಆಚರಿಸಲಾಯಿತು.
ಯೋಗಿ ನಾರೇಯಣ ಮಠದ ಆವರಣದಲ್ಲಿರುವ ಅರಳಿ ಮರ, ಹುತ್ತ ಮತ್ತು ನಾಗರ ಕಲ್ಲುಗಳಿಗೆ ಮಹಿಳೆಯರು ಪೂಜೆ ಸಲ್ಲಿಸಿದರು. ಮಹಿಳೆಯರು ಹುತ್ತ ಇರುವ ಕಡೆ ತೆರಳಿ ಹುತ್ತಕ್ಕೆ ದಾರ ಸುತ್ತಿ ಅರಿಶಿನ, ಕುಂಕುಮ ಇಟ್ಟು ಪೂಜೆ ಸಲ್ಲಿಸಿದರು. ಹುತ್ತ ಮತ್ತು ನಾಗರ ಕಲ್ಲುಗಳಿಗೆ ಹಾಲೆರೆದರು.
ಕುಮಾರ ಷಷ್ಠಿಯಂದು ಸುಬ್ರಹ್ಮಣ್ಯ ಪೂಜೆ, ನಾಗಬನಕ್ಕೆ ಹಾಲಿನ ಅಭಿಷೇಕ ಮಾಡುವುದರಿಂದ ನಾಗಾಂಶದಿಂದ ಉಂಟಾಗುವ ಸಮಸ್ಯೆಗೆ ಪರಿಹಾರ ದೊರೆತು ಇಷ್ಟಾರ್ಥ ಸಿದ್ಧಿಸುತ್ತವೆ. ನಾಲಿಗೆ, ಹಣೆಯ ಭಾಗ ಮತ್ತು ಬೆನ್ನುಮೂಳೆಯಲ್ಲಿ ನಾಗಾಂಶವು ಇರುತ್ತದೆ ಎಂದು ಜನರಲ್ಲಿ ಪ್ರತೀತಿ ಇದೆ ಎಂದು ಶಿಕ್ಷಕ ಶ್ರೀಧರ ಹೀರೆಮಠ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.