ಬಾಗೇಪಲ್ಲಿ: ಬಾಗಲಕೋಟೆ ಜಿಲ್ಲೆಯ ಬಾದಾಮಿಯ ತಾಲ್ಲೂಕಿನ ನ್ಯಾಯಾಲಯದಲ್ಲಿ ವಕೀಲರನ್ನು ಬಂಧಿಸುವಂತೆ ಸೂಚನೆ ನೀಡಿರುವ ಕ್ರಮ ಖಂಡಿಸಿ ಬಾಗೇಪಲ್ಲಿ ಸಿವಿಲ್ ನ್ಯಾಯಾಲಯದ ಕಲಾಪಗಳಿಂದ ವಕೀಲರು ಶುಕ್ರವಾರ ದೂರು ಉಳಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡಪ್ಪ ಮಾತನಾಡಿ, ಬಾದಾಮಿ ತಾಲ್ಲೂಕಿನ ವಕೀಲರ ಸಂಘದ ಸದಸ್ಯ ಮಲ್ಲಾಪುರ ಅವರು ತೆರೆದ ನ್ಯಾಯಾಲಯದಲ್ಲಿ ಪ್ರಕರಣ ಸಲ್ಲಿಸಿದಾಗ, ಬಾದಾಮಿ ಪ್ರಧಾನ ನ್ಯಾಯಾಧೀಶ ಸಂಜೀವಕುಮಾರ್ ಪಹಾಚೆಪುರ್ ಅವರು ವಕೀಲರ ಬಂಧನಕ್ಕೆ ಸೂಚಿಸಿರುವುದು ಖಂಡನೀಯ ಎಂದರು.
ವಕೀಲರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಖಂಡಿಸಿ, ಸಹೊದ್ಯೋಗಿ ವಕೀಲರನ್ನು ಬೆಂಬಲಿಸಿ ತಾಲ್ಲೂಕು ವಕೀಲರ ಸಂಘ ತೀರ್ಮಾನಿಸಿದೆ. ಇದರಿಂದ ಒಂದು ದಿನದ ಕಾಲ ಪಟ್ಟಣದ ನ್ಯಾಯಾಲಯದ ಕಾರ್ಯ ಕಲಾಪಗಳಿಂದ ದೂರ ಉಳಿಯಲಾಗಿದೆ ಎಂದು ತಿಳಿಸಿದರು.
ಸಹಾಯಕ ಸರ್ಕಾರಿ ಅಭಿಯೋಜಕ ಸಿ.ಎನ್.ಚಿನ್ನಸ್ವಾಮಿ, ವಕೀಲರಾದ ಕರುಣಾಸಾಗರರೆಡ್ಡಿ, ಅಲ್ಲಾಬಕಾಷ್, ಮುಸ್ತಾಕ್‌ಅಹಮದ್, ಜಯಪ್ಪ, ನಾರಾಯಣ, ರವಿ, ವಿ.ನಾರಾಯಣ, ಲಕ್ಷ್ಮಣರೆಡ್ಡಿ, ನಾಗಭೂಷಣ್‌ನಾಯಕ್, ಬಾಲುನಾಯಕ್, ಸತೀಶ್, ಶ್ರೀನಿವಾಸ್, ಅರುಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.