ಗೌರಿಬಿದನೂರು: ಜನಪ್ರತಿನಿಧಿಗಳು, ನಟ-ನಟಿಯರು ಜನರಿಗೆ ಮಾದರಿಯಾಗಿರಬೇಕು. ಇವರನ್ನು ನೋಡಿ ಅನೇಕರು ಜೀವನದಲ್ಲಿ ಬದಲಾಗುತ್ತಾರೆ. ಆದರೆ, ನಾವೇ ಮಾದಕ ವಸ್ತುಗಳನ್ನು ಸೇವಿಸಿ ತಪ್ಪು ಸಂದೇಶ ಜನರಿಗೆ ಕೊಡಬಾರದು. ಇದರಿಂದ ಸಮಾಜದಲ್ಲಿ ಗಳಿಸಿದ ಹೆಸರು ಮಣ್ಣು ಪಾಲಾಗುತ್ತದೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಗೌರಿಬಿದನೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ಮಾದಕ ವಸ್ತುಗಳ ನಿಗ್ರಹಕ್ಕೆ ಕಠಿಣ ಕ್ರಮ ತಗೆದುಕೊಳ್ಳಲಾಗುವುದು. ಈಗಾಗಲೇ ಈ ಸಂಬಂಧ ಗೃಹ ಸಚಿವರ ಜತೆ ಮಾತನಾಡಿದ್ದೇನೆ. ಸರ್ಕಾರ ಈ ಚಟುವಟಿಕೆಗೆಳ ವಿರುದ್ಧ ಕ್ರಮ ಕೈಗೊಳ್ಳಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.