ADVERTISEMENT

ನಗರಸಭೆ ಚುನಾವಣೆ: ಮಂದಗತಿಯ ಮತದಾನ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 5:48 IST
Last Updated 9 ಫೆಬ್ರುವರಿ 2020, 5:48 IST
ನಗರದ 19ನೇ ವಾರ್ಡ್ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 37ರಲ್ಲಿ ಮತ ಚಲಾಯಿಸಿದ ಬಾದಾಮಿ ಕುಟುಂಬದ ಸದಸ್ಯರು
ನಗರದ 19ನೇ ವಾರ್ಡ್ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 37ರಲ್ಲಿ ಮತ ಚಲಾಯಿಸಿದ ಬಾದಾಮಿ ಕುಟುಂಬದ ಸದಸ್ಯರು   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ ಮತದಾನ ಭಾನುವಾರ ಬೆಳಿಗ್ಗೆ 7 ರಿಂದ ಆರಂಭಗೊಂಡಿದ್ದು, ಮಂದಗತಿಯ ಮತದಾನ ನಡೆದಿದೆ.

ನಗರದ 31 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು, ಸ್ಪರ್ಧಾ ಕಣದಲ್ಲಿ 101 ಅಭ್ಯರ್ಥಿಗಳಿದ್ದಾರೆ. ಇವರ ಭವಿಷ್ಯವನ್ನು ಇಂದು 50, 538 ಮತದಾರರು ನಿರ್ಧರಿಸಲಿದ್ದಾರೆ.

ಮತದಾನಕ್ಕಾಗಿ 11 ಸೂಕ್ಷ್ಮ ಮತಗಟ್ಟೆ ಸೇರಿದಂತೆ ಒಟ್ಟು 54 ಮತಗಟ್ಟೆ ತೆರೆಯಲಾಗಿದೆ.ಭದ್ರತೆಗಾಗಿ 250ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸಂಜೆ 5ರ ವರೆಗೆ ಮತದಾನ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.