ಸಾವು (ಪ್ರಾತಿನಿಧಿಕ ಚಿತ್ರ)
ಗೌರಿಬಿದನೂರು: ರಕ್ತಸ್ರಾವದಿಂದ ತಾಲ್ಲೂಕಿನ ಪುಲುಗಾನಹಳ್ಳಿ ಬಾಣಂತಿ ಭಾಗ್ಯಮ್ಮ (30) ಮೃತಪಟ್ಟಿದ್ದು, ಇದಕ್ಕೆ ರಕ್ತದ ಗುಂಪಿನ ಗೊಂದಲ ತಳುಕು ಹಾಕಿಕೊಂಡಿದೆ.
ಅಲೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಭಾಗ್ಯಮ್ಮ ಅವರ ರಕ್ತದ ಗುಂಪು ‘ಬಿ+’ ಎಂದು ವರದಿ ನೀಡಿದ್ದರು. ಗೌರಿಬಿದನೂರು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಜೇರಿಯನ್ ಮೂಲಕ ಅವರಿಗೆ ಹೆರಿಗೆಯಾಗಿತ್ತು.
ಶಸ್ತ್ರಚಿಕಿತ್ಸೆ ನಂತರ ರಕ್ತಸ್ರಾವ ಹೆಚ್ಚಾಗಿದೆ. ರಕ್ತ ನೀಡಲು ಪರೀಕ್ಷೆ ನಡೆಸಿದಾಗ ‘ಬಿ–’ ಗುಂಪು ಎಂದು ವರದಿ ಬಂದಿದೆ. ವೈದ್ಯರು ಇಲ್ಲಿ ರಕ್ತ ನೀಡಿ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿದ್ದು ಅಲ್ಲಿ ಬಾಣಂತಿ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.