ADVERTISEMENT

ಕಾಂಗ್ರೆಸ್‌ ಬಲಿದಾನದಿಂದ ಮೋದಿ ಪ್ರಧಾನಿ: ರಮೇಶ್‌ ಕುಮಾರ್‌

ಶಾಸಕ ರಮೇಶ್‌ ಕುಮಾರ್‌ ತಿರುಗೇಟು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 16:33 IST
Last Updated 3 ಡಿಸೆಂಬರ್ 2021, 16:33 IST
ಕೆ.ಆರ್. ರಮೇಶ್ ಕುಮಾರ್
ಕೆ.ಆರ್. ರಮೇಶ್ ಕುಮಾರ್   

ಚಿಂತಾಮಣಿ (ಚಿಕ್ಕಬಳ್ಳಾಪುರ):‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೇಕಪ್ ಮಾಡಿಕೊಂಡು ದೂರದರ್ಶನದಲ್ಲಿ ಮಾತನಾಡುವ ಅವಕಾಶ ಹೇಗೆ ದೊರೆಯಿತು ಎಂದು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದುಶಾಸಕ ಕೆ.ಆರ್. ರಮೇಶ್‌ ಕುಮಾರ್ಶುಕ್ರವಾರ ಲೇವಡಿ ಮಾಡಿದ್ದಾರೆ.

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,‘ಕಾಂಗ್ರೆಸ್ ಪಕ್ಷದ ತ್ಯಾಗ, ಬಲಿದಾನದಿಂದ ಇಂದು ಅವರು ಅಧಿಕಾರ ಅನುಭವಿಸುತ್ತಿದ್ದಾರೆ. ಧ್ವಜವನ್ನು ಹಿಡಿದು ಭಾರತ್ ಮಾತಾ ಕೀ ಜೈ ಎನ್ನುತ್ತಾರೆ. ಧ್ವಜವನ್ನು ಕೊಟ್ಟವರು ಯಾರು, ಮಾತಾಡುವ ಸ್ವಾತಂತ್ರ್ಯವನ್ನು ಕೊಟ್ಟವರು ಯಾರೆಂಬುದನ್ನು ಒಮ್ಮೆ ನೆನಪಿಸಿಕೊಳ್ಳಲಿ’ ಎಂದರು.

‘ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಏನೂ ಇಲ್ಲ ಎಂದು ಪ್ರಧಾನಿ ಮೋದಿ ಎಲ್ಲಾ ಕಡೆ ಹೇಳುತ್ತಾರೆ. ಕೋಟ್ಯಂತರ ಕಾರ್ಯಕರ್ತರು, ಮುಖಂಡರ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದರಿಂದಲೇ ಬಿಜೆಪಿ ಇಂದು ಅಧಿಕಾರ ಅನುಭವಿಸುತ್ತಿದೆ. ಮೋದಿ ಪ್ರಧಾನಿ ಆಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಮಾತೆತ್ತಿದರೆ ಬಿಜೆಪಿಯವರು ನಾವು ರಾಮನ ಭಕ್ತರು,ರಾಮಮಂದಿರ ಎನ್ನುತ್ತಾರೆ. ನಾವೂ ರಾಮನ ಭಕ್ತರೇ. ರಾಮಮಂದಿರ ಕಟ್ಟಬೇಡಿ ಎಂದು ನಾವು ಎಂದೂ ಹೇಳಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.