ADVERTISEMENT

ಕೋಚಿಮುಲ್ ವಿಭಜನೆ ಬೇಡ ಎಂದಿದ್ದ ಎನ್‌ಡಿಡಿಬಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 8:16 IST
Last Updated 6 ಸೆಪ್ಟೆಂಬರ್ 2021, 8:16 IST

ಚಿಕ್ಕಬಳ್ಳಾಪುರ: ಕೋಚಿಮುಲ್ ವಿಭಜನೆಯ ವಿಚಾರ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪರಸ್ಪರ ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ನೇತೃತ್ವದ ನಿಯೋಗವೊಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ವಿಭಜನೆಗೆ ಕ್ರಮಕೈಗೊಳ್ಳುವಂತೆ ಕೋರಿದೆ.

ಈ ಬೆಳವಣಿಗೆ ನಡುವೆಯೇ ರಾಷ್ಟ್ರೀಯ ಹೈನುಗಾರಿಕಾ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) 2016ರಲ್ಲಿ ಕೋಚಿಮುಲ್ ವಿಭಜನೆ ಬೇಡ ಎಂದು ಬರೆದಿರುವ ಪತ್ರ ಸಹ ಚರ್ಚೆಗೆ ಒಳಗಾಗಿದೆ.

2016ರಲ್ಲಿ ನಡೆದ ಕೋಚಿಮುಲ್‌ ಸಭೆಯಲ್ಲಿ ಕೋಚಿಮುಲ್ ವಿಭಜನೆಯ ಅಜೆಂಡಾ ಸಹ ಪ್ರಸ್ತಾಪವಾಗಿತ್ತು. ಆಗ ಎನ್‌ಡಿಡಿಬಿ ಕೋಚಿಮುಲ್‌ಗೆ ಪತ್ರ ಬರೆದು ವಿಭಜನೆ ಬೇಡ ಎಂದಿತ್ತು. ಉತ್ತರ ಪ್ರದೇಶ, ಗುಜರಾತ್ ಮತ್ತು ಹರಿಯಾಣ ರಾಜ್ಯದಲ್ಲಿ ಹಾಲು ಒಕ್ಕೂಟಗಳ ವಿಭಜನೆ ಪ್ರಸ್ತಾಪ ಮತ್ತು ಅವುಗಳನ್ನು ಒಗ್ಗೂಡಿಸಿರುವ ಬಗ್ಗೆಯೂ ಪತ್ರದಲ್ಲಿ ಎನ್‌ಡಿಡಿಬಿ ಮಾತ್ರ ನೀಡಿತ್ತು.

ADVERTISEMENT

ಈಗ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಇದೆ. ಆದ ಕಾರಣ ವಿಭಜನೆಗೆ ದಾರಿ ಸುಗಮವಾಗಲಿದೆ ಎನ್ನುವ ಮಾತು ಸಹ ಜಿಲ್ಲೆಯ ಸಹಕಾರ ವಲಯದಲ್ಲಿ ಕೇಳಿ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.