ಬಂಧನ ( ಸಾಂಕೇತಿಕ ಚಿತ್ರ)
ಚಿಕ್ಕಬಳ್ಳಾಪುರ: ಕೊಲೆ, ದರೋಡೆ, ಕಳ್ಳತನ, ಸುಲಿಗೆ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳ ಮೂಲಕ ಕುಖ್ಯಾತ ನಾಗಿರುವ ಬಾಂಬೆ ಸಲೀಂನನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.
ಬಾಂಬೆ ಸಲೀಂ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಹಲವು ಪ್ರಕರಣಗಳಲ್ಲಿ ಈತನನ್ನು ಪೊಲೀಸರು ವಶಕ್ಕೆ ಪಡೆದು ಜೈಲಿಗೂ ಕಳುಹಿಸಿದ್ದರು. ಜೈಲಿನಲ್ಲಿ ಇದ್ದುಕೊಂಡೇ ಸಹಚರರ ಮೂಲಕ ಕಳ್ಳತನ, ದರೋಡೆ ನಡೆಸುತ್ತಿದ್ದ.
ಬೆಂಗಳೂರಿನ ಆವಲಹಳ್ಳಿ ಬಾಂಬೆ ಸಲೀಂ, 10ನೇ ವಯಸ್ಸಿನಲ್ಲಿಯೇ ಮುಂಬೈನಲ್ಲಿ ನಡೆದ ಕೊಲೆ ಪ್ರಕರಣ ವೊಂದರಲ್ಲಿ ಭಾಗಿಯಾಗಿದ್ದ. ಈ ಮೂಲಕ ಅಪರಾಧ ಜಗತ್ತಿಗೆ ಕಾಲಿಟ್ಟ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.