ADVERTISEMENT

ತುಂಬಿ ಹರಿದ ಚಿತ್ರಾವತಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 4:07 IST
Last Updated 19 ಜುಲೈ 2021, 4:07 IST
ಬಾಗೇಪಲ್ಲಿ ಪಟ್ಟಣದ ಸಿವಿಲ್ ನ್ಯಾಯಾಲಯ ಪಕ್ಕದ ಚಿತ್ರಾವತಿ ಮೇಲುಸೇತುವೆ ಕೆಳಗೆ ಮಳೆ ನೀರು ಹರಿಯುತ್ತಿರುವುದು
ಬಾಗೇಪಲ್ಲಿ ಪಟ್ಟಣದ ಸಿವಿಲ್ ನ್ಯಾಯಾಲಯ ಪಕ್ಕದ ಚಿತ್ರಾವತಿ ಮೇಲುಸೇತುವೆ ಕೆಳಗೆ ಮಳೆ ನೀರು ಹರಿಯುತ್ತಿರುವುದು   

ಬಾಗೇಪಲ್ಲಿ: ಪಟ್ಟಣದಲ್ಲಿ ಶನಿವಾರ ಸುರಿದ ಭಾರಿ ಮಳೆಯಿಂದ ಪಟ್ಟಣದ ಸಿವಿಲ್ ನ್ಯಾಯಾಲಯ ಪಕ್ಕದಲ್ಲಿನ ಚಿತ್ರಾವತಿ ಮೇಲುಸೇತುವೆಯಲ್ಲಿ ನೀರು ಹರಿಯುತ್ತಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಿಸಿರುವ ಚಿತ್ರಾವತಿ ಕಣಜ ದಲ್ಲಿಯೂ ನೀರು ತುಂಬಿ ಹರಿಯುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನ ಜಾವದವರಿಗೂ ಮಿಂಚು ಗುಡುಗು ಸಹಿತ ಭಾರೀ ಮಳೆ ಸುರಿದಿದೆ.

ಚಿತ್ರಾವತಿ ಒಡ್ಡುವಿನಲ್ಲಿ ತುಂಬಿ ಹರಿದ ನೀರು ಸಂತೆ ಮೈದಾನದ ರಸ್ತೆಯ ಮೇಲುಸೇತುವೆ, ಸಿವಿಲ್ ನ್ಯಾಯಾಲಯದ ಪಕ್ಕದ ಮೇಲುಸೇತುವೆ ಕೆಳಗೆ ಹರಿಯುತ್ತಿದೆ. ಈ ನೀರು ಆಂಧ್ರಪ್ರದೇಶದ ಬುಕ್ಕಪಟ್ನಂ ಕೆರೆಗೆ ಹಾದು ಹೋಗುತ್ತದೆ.

ADVERTISEMENT

ಮೇಲುಸೇತುವೆ ಕೆಳಭಾಗದಲ್ಲಿದ್ದ ಪ್ಲಾಸ್ಟಿಕ್, ತ್ಯಾಜ್ಯ, ಕಳೆ, ಮುಳ್ಳಿನ ಗಿಡಗಳು ಕೊಚ್ಚಿಕೊಂಡು ಹೋಗಿವೆ. ಆಂಧ್ರಪ್ರದೇಶಕ್ಕೆ ನೀರು ಹರಿಯದಂತೆ ತಡೆಯಲು ಬ್ರಿಟಿಷರು ಚಿತ್ರಾವತಿ ಕಣಜ ನಿರ್ಮಿಸಿದ್ದರು. ಈ ಕಣಜ ತುಂಬಿ ಹರಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.