ಚಿಕ್ಕಬಳ್ಳಾಪುರ: ನಗರದ ಜಿಲ್ಲಾ ಹಳೇ ಸರ್ಕಾರಿ ಆಸ್ಪತ್ರೆಯಲ್ಲಿದ್ದ 10 ಆಮ್ಲಜನಕದ ಸಿಲಿಂಡರ್‌ಗಳು ಕಳ್ಳತನವಾಗಿವೆ. ಹಳೇ ಸರ್ಕಾರಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ.
ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಆಸ್ಪತ್ರೆಯ ಒಂದು ಕೊಠಡಿಯಲ್ಲಿ ಆಮ್ಲಜಕದ ಸಿಲಿಂಡರ್‌ಗಳನ್ನು ಸಂಗ್ರಹಿಸಿಡಲಾಗಿದೆ. ಗ್ರೂಪ್ ‘ಡಿ’ ನೌಕರ ಡಿ.ಎನ್.ಮುನಿರಾಜು ಅವರಿಗೆ ಇದರ ಉಸ್ತುವಾರಿವಹಿಸಲಾಗಿದೆ.
ಡಿ.ಎನ್ ಮುನಿರಾಜು ಬಳಿ ಒಂದು ಕೀಲಿ ಹಾಗೂ ನಿವಾಸಿ ವೈದ್ಯರ ಬಳಿ ಒಂದು ಕೀಲಿ ಇದೆ. ಡಿ.ಎನ್ ಮುನಿರಾಜು ಸಂಜೆ ಸಿಲಿಂಡರ್ ಗಳನ್ನು ಪರೀಶಿಲಿಸಿ ಒಟ್ಟು ಸಿಲಿಂಡರ್‌ಗಳ ಸಂಖ್ಯೆಯನ್ನು ಪುಸ್ತಕದಲ್ಲಿ ನಮೂದಿಸಿ ಬೀಗ ಹಾಕಿಕೊಂಡು ಹೋಗಿದ್ದರು. ಮರುದಿನ ಮುನಿರಾಜು ಕೊಠಡಿ ಬೀಗ ತೆಗೆದು ನೋಡಿದ್ದು 10 ಆಮ್ಲಜಕನದ ಸಿಲಿಂಡರ್‌ಗಳು ಇರಲಿಲ್ಲ. ಸಿಲಿಂಡರ್‌ಗಳ ಒಟ್ಟು ಬಲೆ ₹ 80,000. ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳುವಂತೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.