ಬಾಗೇಪಲ್ಲಿ: ಪಟ್ಟಣದ ಗುರು ರಾಘವೇಂದ್ರಸ್ವಾಮಿ ಮಠದಲ್ಲಿ ರಾಘವೇಂದ್ರಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ರಾಘವೇಂದ್ರಸ್ವಾಮಿಯ 353ನೇ ಆರಾಧನ ಮಹೋತ್ಸವ ಮೂರು ದಿನಗಳ ಕಾಲ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಿಂದ ನಡೆಯಿತು.
ಪಟ್ಟಣದ ಮುಖ್ಯರಸ್ತೆಯಲ್ಲಿನ ರಾಘವೇಂದ್ರಸ್ವಾಮಿ ಮಠದಲ್ಲಿ ತಳಿರು ತೋರಣಗಳಿಂದ ಹಾಗೂ ವಿದ್ಯೂತ್ ದೀಪಾಲಂಕಾರದಿಂದ ಸಿಂಗರಿಸಲಾಗಿತ್ತು.
ಆರಾಧನಾ ಮಹೋತ್ಸವದ ಅಂಗವಾಗಿ ರಾಘವೇಂದ್ರಸ್ವಾಮಿ ಬೃಂದಾವನಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಯಿತು.
ರಾಘವೇಂದ್ರಸ್ವಾಮಿ ಮಠದ ಸುತ್ತ ಪ್ರಾಕಾರ ರಥೋತ್ಸವ, ತೊಟ್ಟಿಲಸೇವೆ, ಮಹಾಮಂಗಳಾರತಿ, ಭಕ್ತರಿಗೆ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿತ್ತು. ವಿಪ್ರ ಹಾಗೂ ಆರ್ಯವೈಶ್ಯ ಮಹಿಳೆಯರು ಸೇರಿದಂತೆ ಭಕ್ತರು ದೇವರ ನಾಮ ಹಾಗೂ ಭಜನೆ ಮಾಡಿದರು.
ರಾಘವೇಮದ್ರಸ್ವಾಮಿ ಸೇವಾ ಟ್ರಸ್ಟ್ ಆಡಳಿತ ಮಂಡಲಿ ಅಧ್ಯಕ್ಷ, ನಿವೃತ್ತ ಕೆಎಸ್ ಅಧಿಕಾರಿ ಎಚ್.ಚಿತ್ತರಂಜನ್, ಉಪಾಧ್ಯಕ್ಷ ಪಾಂಡುರಂಗ, ಕಾರ್ಯದರ್ಶಿ ಸಿ.ವಿ.ವೆಂಕಟರಾವ್, ಸಹಕಾರ್ಯದರ್ಶಿ ಎಂ.ಎ.ಶ್ರೀನಿವಾಸತಂತ್ರಿ, ಬಂಗಾರುಬದ್ರಿ, ಎಸ್.ಮುನಿರಾಮಯ್ಯ, ಡಿ.ಎ.ಅಮರನಾಥ್, ಎಚ್.ಎನ್.ರವೀಂದ್ರನಾಥ್, ಬಿ.ಎಸ್.ನಂಜುಂಡಶರ್ಮ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.