ADVERTISEMENT

ಚಿಕ್ಕಬಳ್ಳಾಪುರ: ಪೊಲೀಸ್ ಅತಿಥಿ ಗೃಹದಲ್ಲಿ ರಾಜೀವ್ ಗೌಡ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 5:22 IST
Last Updated 27 ಜನವರಿ 2026, 5:22 IST
   

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಮೊಬೈಲ್ ಕರೆ ಮಾಡಿ ಧಮ್ಕಿ ಹಾಕಿದ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರನ್ನು ಪೊಲೀಸ್ ಅತಿಥಿ ಗೃಹದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ರಾಜೀವ್ ಗೌಡ ಅವರಿಗೆ ಮಂಗಳೂರಿನಲ್ಲಿ ಮೂರು ದಿನ ಆಶ್ರಯ ನೀಡಿದ ಉದ್ಯಮಿ ಮೈಕಲ್ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಡರಾತ್ರಿ ಈ ಇಬ್ಬರನ್ನು ಕರೆತಂದು ನಗರ ಪೊಲೀಸ್ ಠಾಣೆ ಬಳಿಯ ಅತಿಥಿ ಗೃಹದಲ್ಲಿ ಇರಿಸಲಾಗಿದೆ.

ADVERTISEMENT

ಬೆಳಿಗ್ಗೆಯಿಂದಲೇ ಎಎಸ್‌ಪಿ ಜಗನ್ನಾಥ ರೈ, ಡಿವೈಎಸ್‌ಪಿ ರವಿಕುಮಾರ್, ತನಿಖಾಧಿಕಾರಿ ಇನ್ ಸ್ಪೆಕ್ಟರ್ ಆನಂದ್ ವಿಚಾರಣೆ ನಡೆಸುತ್ತಿದ್ದಾರೆ.

ಸೀನ್ ಆಫ್ ಕ್ರೈಂ ಆಫೀಸರ್ಸ್ (ಸೋಕೊ) ತಂಡ ಸಹ ವಿಚಾರಣೆಯಲ್ಲಿ ಭಾಗಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.