ADVERTISEMENT

ಪಶು ಆಹಾರ ಬೆಲೆ ಕಡಿಮೆ ಮಾಡಿ: ಕೋಚಿಮುಲ್ ನಿರ್ದೇಶಕರ ಅಶ್ವತ್ಥನಾರಾಯಣಬಾಬು ಒತ್ತಾಯ

ಕೋಚಿಮುಲ್ ನಿರ್ದೇಶಕ ವೈ.ವಿ.ಅಶ್ವತ್ಥನಾರಾಯಣಬಾಬು ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 3:09 IST
Last Updated 9 ಸೆಪ್ಟೆಂಬರ್ 2020, 3:09 IST
ಚಿಂತಾಮಣಿಯ ಹಾಲು ಒಕ್ಕೂಟದ ಶಿಬಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರಿಗೆ ವಿಮಾ ಮೊತ್ತದ ಚೆಕ್ ಗಳನ್ನು ಒಕ್ಕೂಟದ ನಿರ್ದೇಶಕ ಅಶ್ವತ್ಥನಾರಾಯಣಬಾಬು ವಿತರಿಸಿದರು.
ಚಿಂತಾಮಣಿಯ ಹಾಲು ಒಕ್ಕೂಟದ ಶಿಬಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರಿಗೆ ವಿಮಾ ಮೊತ್ತದ ಚೆಕ್ ಗಳನ್ನು ಒಕ್ಕೂಟದ ನಿರ್ದೇಶಕ ಅಶ್ವತ್ಥನಾರಾಯಣಬಾಬು ವಿತರಿಸಿದರು.   

ಚಿಂತಾಮಣಿ: ರಾಜ್ಯದಲ್ಲಿ ರೈತರಿಂದ ಹಾಲು ಖರೀದಿಸುವ ದರವನ್ನು ಕಡಿಮೆ ಮಾಡಿರುವುದರಿಂದ ಕರ್ನಾಟಕ ಹಾಲು ಮಹಾಮಂಡಳಿಯು ಪಶು ಆಹಾರ (ಫೀಡ್) ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಕೋಚಿಮುಲ್ ನಿರ್ದೇಶಕ ವೈ.ವಿ.ಅಶ್ವತ್ಥ ನಾರಾಯಣಬಾಬು ಒತ್ತಾಯಿಸಿದರು.

ನಗರದ ಹಾಲು ಒಕ್ಕೂಟದ ಶಿಬಿರದ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರಿಗೆ ಹಸುಗಳ ವಿಮಾ ಮೊತ್ತದ ಚೆಕ್ ವಿತರಿಸಿ ಮಾತನಾಡಿದರು.

ಕೋವಿಡ್-19ನಿಂದ ಜನರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಜನ ಸಾಮಾನ್ಯರು ಜೀವನ ನಡೆಸುವುದೇ ದುಸ್ತರವಾಗಿದೆ. ರಾಜ್ಯದ ಎಲ್ಲ ಹಾಲು ಒಕ್ಕೂಟಗಳು ಖರೀದಿ ದರವನ್ನುಕಡಿಮೆ ಮಾಡಿವೆ. ಆದರೆ, ಕರ್ನಾಟಕ ಹಾಲು ಮಹಾಮಂಡಳಿಯು ಪಶು ಆಹಾರದ ಬೆಲೆಯನ್ನು ಕಡಿಮೆ ಮಾಡದೆ ರೈತರ ಶಾಪಕ್ಕೆ ಗುರಿಯಾಗುತ್ತಿದೆ. ಹಾಲಿನ ದರ ಕಡಿಮೆ ಆಗಿರುವುದರಿಂದ ರೈತರಿಗೆ ನಷ್ಟವಾಗುತ್ತಿದೆ.
ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಪಶು ಆಹಾರದ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ರೈತರು ತಮ್ಮ ಹಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಆಕಸ್ಮಿಕವಾಗಿ ಮೃತಪಟ್ಟರೆ ಮತ್ತೆ ಹಸು ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ. ಅತ್ಯಂತ ಕಡಿಮೆ ಕಂತಿನಲ್ಲಿ ವಿಮೆ ಮಾಡಿಸಬಹುದು ಎಂದರು.

22 ಜನ ಉತ್ಪಾದಕ ಫಲಾನುಭವಿಗಳಿಗೆ ₹13 ಲಕ್ಷ ಮೊತ್ತವನ್ನು ಚೆಕ್ ಮೂಲಕ ವಿತರಿಸಲಾಯಿತು. ಶಿಬಿರದ ಸಹಾಯಕ ನಿರ್ದೇಶಕ ಎ.ವಿ.ಶಂಕರರೆಡ್ಡಿ, ಪ್ರಾಣಿ ಪ್ರಯೋಗಾಲಯದ ಮುಖ್ಯಸ್ಥ ಡಾ. ರಾಘವೇಂದ್ರ, ವಿಸ್ತರಣಾಧಿಕಾರಿಗಳಾದ ಪಿ.ವೆಂಕಟರವಣ, ವೆಂಕಟೇಶಮೂರ್ತಿ, ಎಂ.ಎಸ್. ನಾರಾಯಣಸ್ವಾಮಿ, ಶಂಕರ್, ಎನ್.ನಾರಾಯಣಸ್ವಾಮಿ, ಕೆ.ಪ್ರೇಮಕಿರಣ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.