ADVERTISEMENT

ಅಂಬೇಡ್ಕರ್ ಭವನ ಜಾಗಕಾಯ್ದಿರಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 7:48 IST
Last Updated 1 ನವೆಂಬರ್ 2021, 7:48 IST
ಚಿಕ್ಕಬಳ್ಳಾಪುರದಲ್ಲಿ ಸುಸಜ್ಜಿತವಾದ ಬಿ. ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕೋರಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶಿವಕುಮಾರ್ ಅವರಿಗೆ ಅಖಿಲ ಭಾರತೀಯ ಪರಿಶಿಷ್ಟ ಜಾತಿ ಯುವಜನ ಸಮಾಜದ ಜಿಲ್ಲಾ ಘಟಕ ಹಾಗೂ ಜನಪದವಾಗಲಿ ಸಂವಿಧಾನ ಅಭಿಯಾನ ವೇದಿಕೆಯ ಸದಸ್ಯರು ಮನವಿ ಸಲ್ಲಿಸಿದರು. ಸಂಘಟನೆ ಅಧ್ಯಕ್ಷ ಕುರುಬರಹಳ್ಳಿ ಜಿ. ಮೂರ್ತಿ, ಪ್ರಧಾನ ಕಾರ್ಯದರ್ಶಿ ಡಿ.ಎನ್. ನರಸಿಂಹಪ್ಪ, ಆರ್.ನಾಗರಾಜ್, ಶಿವಕುಮಾರ್, ಆದಿನಾರಾಯಣಪ್ಪ ಇದ್ದರು

ಚಿಕ್ಕಬಳ್ಳಾಪುರ: ಜಿಲ್ಲಾ ಮಟ್ಟದಲ್ಲಿ ಸುಸಜ್ಜಿತವಾದ ಬಿ. ಆರ್. ಅಂಬೇಡ್ಕರ್ ಭವನವನ್ನು ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸಲು 5 ಎಕರೆ ಜಾಗವನ್ನು ಕಾಯ್ದಿರಿಸಬೇಕು. ಆ ಕಟ್ಟಡದಲ್ಲಿ ಸಭಾಂಗಣ, ಇ-ಗ್ರಂಥಾಲಯ, ಫೋಟೊ ಗ್ಯಾಲರಿ, ಬಿ. ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರವನ್ನು ಅಭಿವೃದ್ಧಿಪಡಿಸಬೇಕು ಎಂದು ಕೋರಿ ಅಖಿಲ ಭಾರತೀಯ ಪರಿಶಿಷ್ಟ ಜಾತಿ ಯುವಜನ ಸಮಾಜದ ಜಿಲ್ಲಾ ಘಟಕ ಹಾಗೂ ಜನಪದವಾಗಲಿ ಸಂವಿಧಾನ ಅಭಿಯಾನ ವೇದಿಕೆಯ ಸದಸ್ಯರು ಇತ್ತೀಚೆಗೆ ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಡದ ಜನಸಂಖ್ಯೆ ಗಣನೀಯವಾಗಿದೆ. ಇದು ಸರ್ಕಾರದ ಅಂಕಿ ಅಂಶಗಳಿಂದಲೇ ಸ್ಪಷ್ಟವಾಗುತ್ತದೆ. ಹೀಗಿದ್ದರೂ ಸುಸಜ್ಜಿತ ಅಂಬೇಡ್ಕರ್ ಭವನವಿಲ್ಲ. ₹ 15 ಕೋಟಿ ವೆಚ್ಚದಲ್ಲಿ ಭವನವನ್ನು ನಿರ್ಮಿಸಬೇಕು. ಪರಿಶಿಷ್ಟ ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ ಸೇರಿದಂತೆ ವಿವಿಧ ಆಯಾಮಗಳ ಅಭಿವೃದ್ಧಿಗೆ ಭವನವು ಪೂರಕವಾಗಬೇಕು ಎಂದು ಸಂಘಟನೆ ಸದಸ್ಯರು ಕೋರಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT