ADVERTISEMENT

ಶಿಡ್ಲಘಟ್ಟ: ಮೃತ ವ್ಯಕ್ತಿ ಹೆಸರಿನಲ್ಲಿ ದಾಖಲೆ ಸೃಷ್ಟಿಸಿ 2 ಎಕರೆ ಜಮೀನು ಮಾರಾಟ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 5:17 IST
Last Updated 9 ಫೆಬ್ರುವರಿ 2026, 5:17 IST
ಶಿಡ್ಲಘಟ್ಟ ತಾಲ್ಲೂಕು ಬಸವಾಪಟ್ಟಣದ ನಾರಾಯಣಪ್ಪ ಅವರ ಕುಟುಂಬದವರು ಅಕ್ರಮವಾಗಿ ಮಾರಾವಾಗಿರುವ ಜಮೀನಿನಲ್ಲಿ ನಿಂತು ಅಕ್ರಮ ಮಾರಾಟ ಮಾಡಿದವರನ್ನು ಪತ್ತೆ ಹಚ್ಚಿ ಬಂಧಿಸುವಂತೆ ಆಗ್ರಹಿಸಿದರು
ಶಿಡ್ಲಘಟ್ಟ ತಾಲ್ಲೂಕು ಬಸವಾಪಟ್ಟಣದ ನಾರಾಯಣಪ್ಪ ಅವರ ಕುಟುಂಬದವರು ಅಕ್ರಮವಾಗಿ ಮಾರಾವಾಗಿರುವ ಜಮೀನಿನಲ್ಲಿ ನಿಂತು ಅಕ್ರಮ ಮಾರಾಟ ಮಾಡಿದವರನ್ನು ಪತ್ತೆ ಹಚ್ಚಿ ಬಂಧಿಸುವಂತೆ ಆಗ್ರಹಿಸಿದರು   

ಶಿಡ್ಲಘಟ್ಟ: ‘ಮೃತಪಟ್ಟ ವ್ಯಕ್ತಿಯ ಹೆಸರು ಮತ್ತು ವಿಳಾಸವಿರುವ ಆಧಾರ್ ಕಾರ್ಡ್ ಹಾಗೂ ಇನ್ನಿತರೆ ದಾಖಲೆ ಸೃಷ್ಟಿಸಿ ತಾನೇ ಆ ವ್ಯಕ್ತಿ ಎಂದು ನಂಬಿಸಿ ಮೃತ ವ್ಯಕ್ತಿಯ ಹೆಸರಲ್ಲಿದ್ದ ಎರಡು ಎಕರೆ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ’.

ತಾಲ್ಲೂಕಿನ ಬಸವಾಪಟ್ಟಣ ಗ್ರಾಮದ ಚನ್ನಕೇಶವ, ತಾನು ನಾರಾಯಣಪ್ಪ ಎಂದು ಆಧಾರ್ ಕಾರ್ಡ್ ಸೇರಿದಂತೆ ಇತರೆ ದಾಖಲೆಗಳನ್ನು ಸೃಷ್ಟಿಸಿ ಅದೇ ಗ್ರಾಮದ 26 ವರ್ಷಗಳ ಹಿಂದೆಯೇ ಮೃತಪಟ್ಟಿರುವ ನಾರಾಯಣಪ್ಪ ಎಂಬುವವರ ಹೆಸರಲ್ಲಿದ್ದ 2 ಎಕರೆ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾನೆ.

ಚಿಂತಾಮಣಿ ತಾಲ್ಲೂಕು ಉಪ ನೋಂದಣಿ ಕಚೇರಿಯಲ್ಲಿ ಈ ಅಕ್ರಮ ನೋಂದಣಿ ನಡೆದಿದೆ. ಅಕ್ರಮವಾಗಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿದ ಚನ್ನಕೇಶವ, ಆತನ ಪತ್ನಿ, ಪುತ್ರಿ, ಪುತ್ರ ಮತ್ತು ನೋಂದಣಿ ಸಮಯದಲ್ಲಿ ಸಾಕ್ಷಿಗಳಾಗಿ ಸಹಿ ಹಾಕಿದ ಇಬ್ಬರ ಮೇಲೆ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಕೆಐಎಡಿಬಿ ವ್ಯಾಪ್ತಿಗೆ ಒಳಪಡುವ ಈ ಜಮೀನು ಮಾರಾಟ ಮಾಡುವುದಾಗಲಿ, ಕೊಳ್ಳುವುದಾಗಲಿ ಮಾಡಬಾರದೆಂಬ ಸೂಚನೆಯಿದ್ದರೂ ಅಕ್ರಮವಾಗಿ ಈ ಜಮೀನಿನ ಮಾರಾಟ ನಡೆದಿದೆ.

ನಡೆದಿದ್ದೇನು: ಬಸವಾಪಟ್ಟಣ ಗ್ರಾಮದ ನಾರಾಯಣಪ್ಪ 26 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಅವರ ಹೆಸರಲ್ಲಿ 2 ಎಕರೆ ಜಮೀನು ಇತ್ತು. ಇದೇ ಗ್ರಾಮದ ಚನ್ನಕೇಶವ ನಾರಾಯಣಪ್ಪ ಎಂಬುದಾಗಿ ಆಧಾರ್ ಕಾರ್ಡ್ ಮತ್ತಿತರೆ ದಾಖಲೆಗಳನ್ನು ಸೃಷ್ಟಿಸಿ, ಬೆಂಗಳೂರಿನ ನಿವಾಸಿಯೊಬ್ಬರಿಗೆ ಮಾರಾಟ ಮಾಡಿದ್ದಾನೆ.

ಅಕ್ರಮ ಜಮೀನು ಮಾರಾಟದ ಕುರಿತು ನಾರಾಯಣಪ್ಪ ಅವರ ಕುಟುಂಬದವರಿಗೆ ವಿಷಯ ತಿಳಿದು ಬಂದಿದ್ದು, ಕೂಡಲೇ ಚನ್ನಕೇಶವ ಅವರ ಮೂಲ ದಾಖಲೆಗಳನ್ನು ಸಂಗ್ರಹಿಸಿ ನೋಂದಣಿ ಕಚೇರಿ ಮತ್ತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.