ADVERTISEMENT

ಎಸ್‌ಜೆಸಿಐಟಿ: ರಾಷ್ಟ್ರೀಯ ಮೆಮೊರಿ ಚಾಂಪಿಯನ್ ಶಿಪ್‌

ದೇಶ, ವಿದೇಶಗಳಿಂದ ಸುಮಾರು 400ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 13:10 IST
Last Updated 12 ಅಕ್ಟೋಬರ್ 2019, 13:10 IST
10ನೇ ರಾಷ್ಟ್ರೀಯ ಮೆಮೊರಿ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿದ ಸ್ಪರ್ಧಾಳುಗಳು
10ನೇ ರಾಷ್ಟ್ರೀಯ ಮೆಮೊರಿ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿದ ಸ್ಪರ್ಧಾಳುಗಳು   

ಚಿಕ್ಕಬಳ್ಳಾಪುರ: ನಗರ ಹೊರವಲಯದ ಶ್ರೀ ಜಗದ್ಗುರು ಚಂದ್ರಶೇಖರ ಸ್ವಾಮೀಜಿ ತಾಂತ್ರಿಕ ಸಂಸ್ಥೆಯ (ಎಸ್‌ಜೆಸಿಐಟಿ) ಕ್ಯಾಂಪಸ್‌ನಲ್ಲಿ ಶನಿವಾರ ನಡೆದ ಎರಡು ದಿನಗಳ 10ನೇ ರಾಷ್ಟ್ರೀಯ ಮೆಮೊರಿ ಚಾಂಪಿಯನ್ ಶಿಪ್‌ನಲ್ಲಿ ದೇಶ, ವಿದೇಶಗಳಿಂದ ಸುಮಾರು 400ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು.

ಚಾಂಪಿಯನ್ ಶಿಪ್‌ನಲ್ಲಿ 11ರಿಂದ 14 ವರ್ಷ (ಕಿಡ್ಸ್), 15 ರಿಂದ 18ವರ್ಷ (ಜೂನಿಯರ್) ಮತ್ತು 18 ರಿಂದ 60 ವರ್ಷ ಹೀಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಆಯ್ಕೆಯಾಗುವವರು ಅಂತರರಾಷ್ಟ್ರೀಯ ಮೆಮೊರಿ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸುವ ಅವಕಾಶ ಪಡೆಯಲಿದ್ದಾರೆ.

ಸ್ಪರ್ಧೆಯ ಮೊದಲ ಮೂರು ಸ್ಥಾನ ಗಳಿಸುವ ಸ್ಪರ್ಧಾಗಳುಗಳಿಗೆ ಅನುಕ್ರಮವಾಗಿ ₹1 ಲಕ್ಷ, ₹50 ಸಾವಿರ, ₹25 ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ಅಂತಿಮ ಫಲಿತಾಂಶ ಭಾನುವಾರ ಪ್ರಕಟವಾಗಲಿದೆ.

ADVERTISEMENT

ಹೈದರಾಬಾದ್‌ನ ಇಂಡಿಯನ್ ನ್ಯಾಷನಲ್ ಮೆಮೊರಿ ಕೌನ್ಸಿಲ್‌ ಅಧ್ಯಕ್ಷ ಜಯಸಿಂಹ, ಲಂಡನ್‌ನ ವಿಶ್ವ ಮೆಮೊರಿ ಸ್ಪೋರ್ಟ್ಸ್ ಕೌನ್ಸಿಲ್ ಮುಖ್ಯ ತೀರ್ಪುಗಾರ ಫಿಲ್ ಚೆಂಬರ್ಸ್, ಲಂಡನ್‌ನ ವಿಶ್ವ ಮೆಮೊರಿ ಸ್ಪೋರ್ಟ್ಸ್ ಕೌನ್ಸಿಲ್ ಎಥಿಕ್ ಕಮಿಟಿ ಮುಖ್ಯಸ್ಥ ಡಾಮಿನಿಕ್ ಬ್ರಿಯಾನ್, ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ, ಬಿಜಿಎಸ್‌ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಎನ್. ಶಿವರಾಮ ರೆಡ್ಡಿ, ಎಸ್‌ಜೆಸಿಐಟಿ ಪ್ರಾಂಶುಪಾಲ ರವಿಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.