ADVERTISEMENT

ಎಚ್‌.ಎಸ್‌.ಗಾರ್ಡನ್‌ ದಾರಿಯಲ್ಲಿ ಕತ್ತಲು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 7:31 IST
Last Updated 6 ಫೆಬ್ರುವರಿ 2026, 7:31 IST
ಚಿಕ್ಕಬಳ್ಳಾಪುರದ ಎಚ್‌.ಎಸ್.ಗಾರ್ಡನ್ ರಸ್ತೆಯಲ್ಲಿ ಕತ್ತಲು
ಚಿಕ್ಕಬಳ್ಳಾಪುರದ ಎಚ್‌.ಎಸ್.ಗಾರ್ಡನ್ ರಸ್ತೆಯಲ್ಲಿ ಕತ್ತಲು   

ಚಿಕ್ಕಬಳ್ಳಾಪುರ: ಎಚ್‌.ಎಸ್.ಗಾರ್ಡನ್ (ಕೆಳಗಿನ ತೋಟಗಳು) ನಗರದ ಪ್ರಮುಖ ಬಡಾವಣೆಗಳಲ್ಲಿ ಒಂದು. ನಗರದಲ್ಲಿ ವೇಗವಾಗಿ ಬೆಳೆಯುತ್ತಿರುವ ಬಡಾವಣೆಗಳಲ್ಲಿ ಒಂದು.

ಇಂತಹ ಬಡಾವಣೆಗೆ ಸಾಗುವ ದಾರಿಯುದ್ದಕ್ಕೂ ಕತ್ತಲೆ! ಹೌದು, ನಗರದ ಬಿಬಿ ರಸ್ತೆಯಿಂದ ಎಚ್‌.ಎಸ್.ಗಾರ್ಡನ್‌ಗೆ ಸಾಗುವ ದಾರಿಯಲ್ಲಿ ಬೀದಿ ದೀಪಗಳು ಇಲ್ಲದೆ ಕತ್ತಲು ಆವರಿಸಿದೆ. ಜಿಲ್ಲಾ ಕ್ರೀಡಾಂಗಣದವರೆಗೂ ಇದೇ ಸ್ಥಿತಿ ಇದೆ. 

ಕೆಲಸಗಳ ನಿಮಿತ್ತ ನಗರದಿಂದ ಹೊರ ಹೋದ ಮಹಿಳೆಯರು ರಾತ್ರಿ ವೇಳೆ ಈ ದಾರಿಯಲ್ಲಿ ನಡೆದುಕೊಂಡು ಬರಲು ಹೆದರುವಂತಾಗಿದೆ. ಬಿಬಿ ರಸ್ತೆಯಿಂದ ಕ್ರೀಡಾಂಗಣದವರೆಗೂ ಬೀದಿ ದೀಪಗಳು ದುರಸ್ತಿಗೆ ಬಂದಿವೆ. 

ADVERTISEMENT

ಕತ್ತಲೆಯ ಕಾರಣದಿಂದ ಇಲ್ಲಿ ರಾತ್ರಿ ಓಡಾಡವೇ ಕಷ್ಟವಾಗಿದೆ ಎನ್ನುತ್ತಾರೆ ಮಹಿಳೆಯರು. ರಾತ್ರಿ 9ರವರೆಗೂ ಜಿಲ್ಲಾ ಕ್ರೀಡಾಂಗಣದಲ್ಲಿ ವಾಯು ವಿಹಾರಿಗಳೂ ಇರುತ್ತಾರೆ.

ಈ ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕು ಎಂದು ನಾಗರಿಕರು ಆಗ್ರಹಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.