ಚಿಂತಾಮಣಿ: ಮುರುಗಮಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಹಳ್ಳಿ ಗ್ರಾಮದಲ್ಲಿ ತೊಟ್ಟಿಯಲ್ಲಿ ನೀರು ಸೇದಲು ಹೋಗಿದ್ದ ವಿದ್ಯಾರ್ಥಿ ನಂದೀಶ್ (11) ಸೋಮವಾರ ಮೃತಪಟ್ಟಿದ್ದಾನೆ.
ಗ್ರಾಮದ ಶಂಕರಪ್ಪ ಹಾಗೂ ಚಂದ್ರಮ್ಮ ಅವರ ಪುತ್ರ ನಂದೀಶ್ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಶಾಲೆಯ ನೀರಿನ ತೊಟ್ಟಿಗೆ ವಿದ್ಯುತ್ ಮೋಟಾರಿನಿಂದ ಕಬ್ಬಿಣದ ಪೈಪ್ ಸಂಪರ್ಕ ನೀಡಲಾಗಿದೆ. ಇಲಿಗಳ ಕಡಿತದಿಂದ ಎರಡು ವಿದ್ಯುತ್ ವೈರುಗಳ ಸಂಪರ್ಕದಿಂದ ಪೈಪ್ ಮೂಲಕ ನೀರಿಗೆ ವಿದ್ಯುತ್ ಪ್ರವಹಿಸಿದೆ ಎನ್ನಲಾಗಿದೆ.
ಕಿರಿಯ ಪ್ರಾಥಮಿಕ ಶಾಲೆಯಾಗಿದ್ದು ಕೊರೊನಾ ಹಿನ್ನೆಲೆಯಲ್ಲಿ ಶಾಲೆ ಬಂದ್ ಆಗಿದೆ. ಬಿಸಿಯೂಟವೂ ಇಲ್ಲದೆ ಅಡುಗೆ ಮನೆ ಸಹ ಬೀಗ ಹಾಕಲಾಗಿದೆ. ನಾಳೆಯ ಗಣರಾಜ್ಯೋತ್ಸವದ ದಿನಾಚರಣೆಗಾಗಿ ಶಾಲೆಯ ವಿದ್ಯಾರ್ಥಿ ಆ ತೊಟ್ಟಿಯಲ್ಲಿ ನೀರು ಸೇದುತ್ತಿದ್ದಾಗ ವಿದ್ಯುತ್ ಪ್ರವಹಿಸಿದೆ ಎನ್ನಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.