ಗುಡಿಬಂಡೆ: ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಚಿಂತಾಮಣಿ ತಾಲ್ಲೂಕು ಮಿಟ್ಟಹಳ್ಳಿ ನಿಸರ್ಗ ಟ್ರಸ್ಟ್‌ನಿಂದ ಮಂಗಳವಾರ ನಡೆದ ಕಲಾ ರಂಗ ಸಂಭ್ರಮದಲ್ಲಿ ವಿದುರಾಶ್ವತ್ಥ ಹತ್ಯಾಕಾಂಡ ನಾಟಕ ಪ್ರದರ್ಶನ ನಡೆಯಿತು.
ಈಗಿನ ವಿದ್ಯಾರ್ಥಿಗಳು ವಿವಿಧ ಸಾಮಾಜಿಕ ಜಾಲತಾಣದಲ್ಲಿ ತೊಡಗಿಸಿಕೊಂಡು ಕಲೆ, ಸಂಸ್ಕೃತಿ ಮರೆಯುತ್ತಿದ್ದಾರೆ. ವಿದ್ಯಾರ್ಥಿಗಳು ನಾಟಕ ಪ್ರದರ್ಶನ ಮಾಡುತ್ತಿರುವುದು ಶ್ಲಾಘನೀಯ ಎಂದು ತಾಲ್ಲೂಕು ಪಂಚಾಯತಿ ಇಒ ನಾಗಮಣಿ ಹೇಳಿದರು.
ತಹಶೀಲ್ದಾರ್ ಸಿಗ್ಬತುಲ್ಲ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಮುಂದೆ ಬರಬೇಕೆಂದರೆ ಚೆನ್ನಾಗಿ ಓದಬೇಕು. ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆಗಿನ ಕೋಲಾರ ಜಿಲ್ಲೆಯ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ಪ್ರಾಣತ್ಯಾಗ ಮಾಡಿದ್ದಾರೆ. ಈ ಎಲ್ಲಾ ಸನ್ನಿವೇಶಗಳನ್ನು ವಿದ್ಯಾರ್ಥಿಗಳು ನಾಟಕದ ಮೂಲಕ ಪ್ರದರ್ಶನ ಮಾಡಿದ್ದಾರೆ ಎಂದರು.
ಚಿಕ್ಕಬಳ್ಳಾಪುರ ಸಕಲ ರಂಗಹೆಜ್ಜೆ ಟ್ರಸ್ಟ್, ವಿಶ್ವ ವಿವೇಕ ಪಿಯು ಕಾಲೇಜಿನ ದಿಲೀಪ್‌ಕುಮಾರ್ ಆರ್ ನಿರ್ದೇಶನ, ಟಿ.ಲಕ್ಷ್ಮಿನಾರಾಯಣ ರಚನೆಯ ವಿದುರಾಶ್ವತ್ಥ ಹತ್ಯಾಕಾಂಡ ನಾಟಕ ಪ್ರದರ್ಶನ ನಡೆಯಿತು. ಸಂಗೀತ ಇನ್ಸಾಫ್ ಹೊಸಪೇಟೆ, ವಸ್ತ್ರವಿನ್ಯಾಸ ಕವಿತ (ಮೈಸೂರು), ಚಿತ್ರ ವಿನ್ಯಾಸ ಸತೀಶ್. ಸಿಎಲ್ ಕಲಾ ಶಿಕ್ಷಕರು ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಮಂಜುನಾಥ, ಪ್ರಾಂಶುಪಾಲ ಡಾ.ಅಪ್ಜಲ್ ಬಿಜಲಿ, ನಾರಾಯಣಸ್ವಾಮಿ, ನಯಾಜ್ ಅಹ್ಮದ್, ಎಂ.ಸಿ. ಜ್ಯೋತಿ, ರಾಜಪ್ಪ, ವಿ.ಶ್ರೀರಾಮಪ್ಪ, ವಾಹಿನಿ ಸುರೇಶ್, ಗುಂಪುಮರದ ಆನಂದ್, ಶ್ರೀನಿವಾಸ್ ಗಾಂಧಿ, ನಾರಾಯಣಸ್ವಾಮಿ, ಯು.ರಾಮಾಂಜಿನೆಯ್ಯ, ಕದಿರಪ್ಪ, ಅಂಬಿಕಾ ಸುದರ್ಶನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.