ADVERTISEMENT

ಹುಲ್ಲಿನ ಮೆದೆಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 4:27 IST
Last Updated 10 ಫೆಬ್ರುವರಿ 2021, 4:27 IST
ಬಾಗೇಪಲ್ಲಿ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ಕೆಲ ದುಷ್ಕರ್ಮಿಗಳು ಮುಸಿಕಿನ ಜೋಳದ ಮೆದೆಗೆ ಬೆಂಕಿ ಹಚ್ಚಿರುವುದು
ಬಾಗೇಪಲ್ಲಿ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ಕೆಲ ದುಷ್ಕರ್ಮಿಗಳು ಮುಸಿಕಿನ ಜೋಳದ ಮೆದೆಗೆ ಬೆಂಕಿ ಹಚ್ಚಿರುವುದು   

ಬಾಗೇಪಲ್ಲಿ: ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ಮಂಗಳವಾರ ಬೆಳಿಗ್ಗೆ ಮುಸಕಿನಜೋಳದ ಮೆದೆಗೆ ಕೆಲ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದರಿಂದ ಮುಸಕಿನಜೋಳ ಹುಲ್ಲು ಸಂಪೂರ್ಣವಾಗಿ ಸುಟ್ಟುಹೋಗಿದೆ.

ಪಟ್ಟಣದ 1ನೇ ವಾರ್ಡ್ ರೈತ, ಹೌಸಿಂಗ್ ಬೋರ್ಡ್‍ನ ನಿವಾಸಿ ಸುಜಾತಮ್ಮ ಹಾಗೂ ಜಯರಾಮಪ್ಪ ದಂಪತಿಯ ಮುಸಕಿನ ಜೋಳದ ಮೆದೆಗೆ ಬೆಂಕಿ ಕಿಡಿಗಳು ಹೊತ್ತಿಕೊಂಡು ಹುಲ್ಲು ಸಂಪೂರ್ಣವಾಗಿ ಸುಟ್ಟಿದೆ. ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ಠಾಣೆಯ ಅಗ್ನಿಶಾಮಕ ಠಾಣೆಯ ಪ್ರಮುಖ ಠಾಣಾಧಿಕಾರಿ ರಾಘವೇಂದ್ರ ಚನ್ನೇಗೌಡಪಾಟೀಲ್, ಸಿಬ್ಬಂದಿ ಮೈಲಾರಪ್ಪ, ಯೂಸಫ್, ಸಂಜುರುದ್ರಪ್ಪ ಬೆಂಕಿ ನಂದಿಸಿದ್ದಾರೆ. ಪುರಸಭಾ ಸದಸ್ಯ ಶ್ರೀನಾಥ್ ಸಂತ್ರಸ್ತರಿಗೆ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT