ADVERTISEMENT

ಚಿಕ್ಕಬಳ್ಳಾಪುರ: ಕೋವಿಡ್ ಸೋಂಕಿತರ ಸಂಖ್ಯೆ 2,947ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 17:27 IST
Last Updated 17 ಆಗಸ್ಟ್ 2020, 17:27 IST
ಚಿಕ್ಕಬಳ್ಳಾಪುರದ ಕೋವಿಡ್‌ ಆಸ್ಪತ್ರೆ
ಚಿಕ್ಕಬಳ್ಳಾಪುರದ ಕೋವಿಡ್‌ ಆಸ್ಪತ್ರೆ   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸೋಮವಾರ 41 ಕೋವಿಡ್‌ 19 ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 2,947ಕ್ಕೆ ಏರಿಕೆಯಾಗಿದೆ.

ಈವರೆಗೆ ಆರೋಗ್ಯ ಇಲಾಖೆ ಸಿಬ್ಬಂದಿ 57,907 ಜನರ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿದ್ದು, ಈ ಪೈಕಿ 54,480 ಮಂದಿ ವರದಿ ನೆಗೆಟಿವ್‌ ಬಂದಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಪೈಕಿ ಈವರೆಗೆ 51 ಜನರು ಮೃತಪಟ್ಟಿದ್ದು, 2,325 ಜನರು ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡಗಡೆಗೊಂಡಿದ್ದಾರೆ. ಸೋಮವಾರ 140 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ 571 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ತಾಲ್ಲೂಕುವಾರು ಕೋವಿಡ್‌ ಪ್ರಕರಣಗಳ ವಿವರ

ತಾಲ್ಲೂಕು;ಆಗಸ್ಟ್ 17;ಒಟ್ಟು;ಬಿಡುಗಡೆ;ಒಟ್ಟು ಬಿಡುಗಡೆ;ಸಕ್ರಿಯ ಪ್ರಕರಣ;ಸಾವು

ಚಿಕ್ಕಬಳ್ಳಾಪುರ;11;1,211;114;979;211;21

ಬಾಗೇಪಲ್ಲಿ;9;334;4;251;78;5

ಚಿಂತಾಮಣಿ;4;497;13;366;122;9

ಗೌರಿಬಿದನೂರು;6;540;6;447;81;12

ಗುಡಿಬಂಡೆ;1;129;0;98;30;1

ಶಿಡ್ಲಘಟ್ಟ;10;236;3;184;49;3

ಒಟ್ಟು;41;2,947;140;2,325;571;51

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.