ADVERTISEMENT

ಚಿಕ್ಕಬಳ್ಳಾಪುರ: ಇಬ್ಬರಲ್ಲಿ ಕೋವಿಡ್-19 ಪತ್ತೆ, ಸೋಂಕಿತರ ಸಂಖ್ಯೆ 185ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 8:17 IST
Last Updated 28 ಜೂನ್ 2020, 8:17 IST
ಭಾನುವಾರ ಬೆಳಿಗ್ಗೆ 19ನೇ ವಾರ್ಡ್‌ನ ಸೋಂಕಿತ ವ್ಯಕ್ತಿಯನ್ನು ಕೋವಿಡ್ ವಾರ್ಡ್‌ಗೆ ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಯಿತು.
ಭಾನುವಾರ ಬೆಳಿಗ್ಗೆ 19ನೇ ವಾರ್ಡ್‌ನ ಸೋಂಕಿತ ವ್ಯಕ್ತಿಯನ್ನು ಕೋವಿಡ್ ವಾರ್ಡ್‌ಗೆ ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಯಿತು.   

ಚಿಕ್ಕಬಳ್ಳಾಪುರ: ನಗರದಲ್ಲಿ ಭಾನುವಾರ ಇಬ್ಬರು ವ್ಯಕ್ತಿಗಳಿಗೆ ಕೋವಿಡ್ 19 ತಗುಲಿರುವುದು ದೃಢಪಟ್ಟಿದೆ. ಇದರಿಂದ ಜಿಲ್ಲಾ ಕೇಂದ್ರದ ನಾಗರಿಕರು‌ ಮತ್ತೆ ತಲ್ಲಣಕ್ಕೆ ಒಳಗಾಗಿದ್ದಾರೆ.

ನಗರದ 19ನೇ ವಾರ್ಡ್ ವ್ಯಾಪ್ತಿಯ ವೆಂಕಟೇನಹಳ್ಳಿ ರಸ್ತೆ ನಿವಾಸಿ, 45 ವರ್ಷದ ಸೀರೆ ವ್ಯಾಪಾರಿ ಮತ್ತು 8ನೇ ವಾರ್ಡ್ ವ್ಯಾಪ್ತಿಯ ಟಿ. ಜಿ.ಟ್ಯಾಂಕ್ ರಸ್ತೆ ನಿವಾಸಿ 29 ವರ್ಷದ ಯುವಕನಲ್ಲಿ ಕೋವಿಡ್ ಪತ್ತೆಯಾಗಿದೆ.

ಇದರಿಂದ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 185ಕ್ಕೆ ಏರಿದೆ. ಆ ಪೈಕಿ ಮೂರು ಜನರು‌ ಮೃತಪಟ್ಟಿದ್ದಾರೆ. ಚಿಕಿತ್ಸೆಯಿಂದ 152 ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ಕೋವಿಡ್ ವಾರ್ಡ್‌ನಲ್ಲಿ‌ 30 ಸೋಂಕಿತರು‌ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.