ADVERTISEMENT

ವೈಜಕೂರು ರೇಷ್ಮೆ ಬೆಳೆಗಾರರ, ರೈತರ ಸೇವಾ ಸಹಕಾರ ಸಂಘ ಕಾಂಗ್ರೆಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 5:16 IST
Last Updated 9 ಫೆಬ್ರುವರಿ 2026, 5:16 IST
ಚಿಂತಾಮಣಿ ತಾಲ್ಲೂಕಿನ ವೈಜಕೂರು ರೇಷ್ಮೆ ಬೆಳೆಗಾರರ ಮತ್ತು ರೈತರ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿ ವಿಜೇತರಾದ ನೂತನ ನಿರ್ದೇಶಕರು 
ಚಿಂತಾಮಣಿ ತಾಲ್ಲೂಕಿನ ವೈಜಕೂರು ರೇಷ್ಮೆ ಬೆಳೆಗಾರರ ಮತ್ತು ರೈತರ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿ ವಿಜೇತರಾದ ನೂತನ ನಿರ್ದೇಶಕರು    

ಚಿಂತಾಮಣಿ: ತಾಲ್ಲೂಕಿನ ಕೈವಾರ ಹೋಬಳಿಯ ವೈಜಕೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ 12 ಮಂದಿ ಕಾಂಗ್ರೆಸ್ ಬೆಂಬಲಿಗರು ಜಯಗಳಿಸಿದ್ದಾರೆ.

ಜೆಡಿಎಸ್ ಭದ್ರಕೋಟೆಯಾಗಿದ್ದ ವೈಜಕೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಚುನಾವಣೆಗೆ ತೀವ್ರ ಜಿದ್ದಾಜಿದ್ದಿನಿಂದ ಭಾನುವಾರ ನಡೆಯಿತು. ಕಾಂಗ್ರೆಸ್ ಬೆಂಬಲಿತರು ಜಯಗಳಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.

ತೀವ್ರ ಜಿದ್ದಾಜಿದ್ದಿನಿಂದ ನಡೆದ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.

ADVERTISEMENT

ನೂತನ ನಿರ್ದೇಶಕರು: ಶ್ರೀನಿವಾಸಮೂರ್ತಿ, ಎ.ಎನ್.ನಾಗರಾಜಪ್ಪ, ಮಂಜುನಾಥ್, ವಿ.ರಾಧಾಕೃಷ್ಣ, ವಿ.ಶ್ರೀನಿವಾಸ, ಎಂ.ವಿನೋದ್,  ಟಿ.ಮುನಿನಾರಾಯಣಪ್ಪ, ಎಂ.ಸುರೇಶ, ಎಚ್.ಸಿ.ಆಶಾ, ಎನ್.ಭಾಗ್ಯಮ್ಮ, ಡಿ.ನರಸಿಂಹಮೂರ್ತಿ, ಬಿ.ಪಿ.ಹರೀಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.