ADVERTISEMENT

ಶಿಡ್ಲಘಟ್ಟ: ತಂಬಾಕು ನಿಷೇಧ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 31 ಮೇ 2025, 13:24 IST
Last Updated 31 ಮೇ 2025, 13:24 IST
ಶಿಡ್ಲಘಟ್ಟದ ಡಾಲ್ಫಿನ್ ಪಿಯು ಕಾಲೇಜಿನಲ್ಲಿ ವಿಶ್ವ ತಂಬಾಕು ನಿಷೇಧ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎಸ್.ರಂಜಿತಾ ಅವರನ್ನು ಗೌರವಿಸಲಾಯಿತು
ಶಿಡ್ಲಘಟ್ಟದ ಡಾಲ್ಫಿನ್ ಪಿಯು ಕಾಲೇಜಿನಲ್ಲಿ ವಿಶ್ವ ತಂಬಾಕು ನಿಷೇಧ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎಸ್.ರಂಜಿತಾ ಅವರನ್ನು ಗೌರವಿಸಲಾಯಿತು   

ಶಿಡ್ಲಘಟ್ಟ: ವಿವಿಧ ರೂಪಗಳಲ್ಲಿ ಸಿಗುವ ಬೀಡಿ, ಸಿಗರೇಟ್ ಮುಂತಾದ ತಂಬಾಕು ಪದಾರ್ಥಗಳ ಸೇವನೆಯಿಂದ ನಾನಾ ರೀತಿಯ ಕ್ಯಾನ್ಸರ್ ರೋಗ ಕಾಡುತ್ತವೆ. ಇದರಿಂದ ಕ್ಯಾನ್ಸರ್ ಪೀಡಿತ ರೋಗಿಗಳಷ್ಟೆ ಅಲ್ಲ ಅವರ ಕುಟುಂಬದವರು ಕೂಡ ಕಷ್ಟಕ್ಕೆ ಸಿಲುಕುತ್ತಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ತಿಳಿಸಿದರು.

ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರದ ಡಾಲ್ಫಿನ್ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ನಿಷೇಧ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಜಾಹೀರಾತುಗಳಿಂದ, ಈಗಾಗಲೆ ತಂಬಾಕು ಪದಾರ್ಥ ಸೇವಿಸುತ್ತಿರುವ ಸ್ನೇಹಿತರ ಒತ್ತಾಯಕ್ಕೆ ಇಲ್ಲವೇ ಎಲ್ಲವನ್ನೂ ಅನುಭವಿಸುವ ಮನೋಭಾವದಿಂದ ಆರಂಭದಲ್ಲಿ ತಂಬಾಕು ಸೇವಿಸಲು ಆರಂಭಿಸುತ್ತಾರೆ. ನಂತರ ಅದು ಚಟವಾಗುತ್ತದೆ. ದೈನಂದಿನ ಕೆಲಸ ಮಾಡಲು ಕೂಡ ಆಗದಷ್ಟು ನಿತ್ರಾಣಗೊಳ್ಳುವಷ್ಟು ಮಟ್ಟಿಗೆ ತಂಬಾಕು ಸೇವನೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಕೆಡಿಸುತ್ತದೆ ಎಂದು ವಿವರಿಸಿದರು.

ADVERTISEMENT

ಸಾಮಾನ್ಯವಾಗಿ ಹದಿಹರೆಯದ ವಯಸ್ಸಿನಲ್ಲಿ ಎಲ್ಲವನ್ನೂ ನೋಡುವ, ತಿಳಿದುಕೊಳ್ಳುವ, ಅನುಭವಿಸುವ ಭಾವನೆ ಇರುತ್ತದೆ. ಜತೆಗೆ ಸ್ನೇಹಿತರ ಒತ್ತಾಯಕ್ಕೆ ಮಣಿದು ತಂಬಾಕು ಸೇವನೆ ಮಾಡುವುದನ್ನು ಆರಂಭಿಸಿ ಕೊನೆಗೆ ಬದುಕು ದುರಂತದಲ್ಲಿ ಅಂತ್ಯವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾವೆಲ್ಲರೂ ಸ್ಪರ್ಧಾ ಜಗತ್ತಿನಲ್ಲಿ ಬದುಕು ನಡೆಸುತ್ತಿದ್ದೇವೆ. ಅದು ವಿದ್ಯಾರ್ಥಿಗಳಾಗಿರಬಹುದು, ರೈತರು, ಶ್ರಮಿಕರು, ಕಾರ್ಮಿಕರು, ಉದ್ಯೋಗಿಗಳು, ಉದ್ಯಮಿಗಳು ಯಾರೇ ಆಗಲಿ ಸ್ಪರ್ಧೆಯನ್ನು ಎದುರಿಸಿಯೆ ಬದುಕಿನಲ್ಲಿ ಮುನ್ನಡೆಯಬೇಕು ಎಂದರೆ ಮೊದಲು ದೈಹಿಕವಾಗಿ ಮಾನಸಿಕವಾಗಿ ಆರೋಗ್ಯವಂತರಾಗಿರಬೇಕು. ಆದ್ದರಿಂದ ಎಲ್ಲರು ಕೂಡ ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ, ಉತ್ತಮ ಸಮಾಜವನ್ನು ನಿರ್ಮಿಸಲು ನೆರವಾಗಿ ಎಂದರು.

ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್ ಮಾತನಾಡಿ, ಮಾರುಕಟ್ಟೆಯಲ್ಲಿ ಸಿಗುವ ತಂಬಾಕು ಪದಾರ್ಥಗಳು ಯಾವ ಯಾವ ರೂಪದಲ್ಲಿ ಸಿಗುತ್ತವೆ. ಅವುಗಳ ಸೇವನೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ, ತಂಬಾಕು ಚಟಕ್ಕೆ ಬಿದ್ದವರಿಂದ ಸಮಾಜಕ್ಕೆ ಆಗುವ ಅನಾಹುತಗಳ ಬಗ್ಗೆ ವಿವರಿಸಿದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎಸ್.ರಂಜಿತಾ, ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್, ಸಿಪಿಐ ಎಂ.ಶ್ರೀನಿವಾಸ್, ವಕೀಲ ರಾಮಕೃಷ್ಣ, ಆರ್.ವಿ.ವೀಣಾ, ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್, ಡಾಲ್ಫಿನ್ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್.ಅಶೋಕ್, ಪ್ರಾಂಶುಪಾಲ ಡಾ.ಶ್ರೀನಿವಾಸಮೂರ್ತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.