ADVERTISEMENT

ಅಡ್ವಾಣಿ ರಥಯಾತ್ರೆಗೆ ನೈತಿಕತೆ ಇಲ್ಲ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 10:10 IST
Last Updated 18 ಅಕ್ಟೋಬರ್ 2011, 10:10 IST

ಚಿಕ್ಕಮಗಳೂರು: `ಭ್ರಷ್ಟಾಚಾರದ ಆರೋಪದ ಮೇಲೆ ಇತ್ತ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಜೈಲು ಸೇರಿದ್ದರೆ, ಅತ್ತ ಭ್ರಷ್ಟಾಚಾರ ವಿರೋಧಿಸಿ ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ನಡೆಸುತ್ತಿ ರುವ ಜನಚಿಂತನಾ ರಥಯಾತ್ರೆಗೆ ನೈತಿಕತೆ ಇಲ್ಲದಂತಾಗಿದೆ~ ಎಂದು ಸಿಪಿಐ (ಎಂ.ಎಲ್) ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎನ್.ರಾಮಚಂದ್ರನ್ ಟೀಕಿಸಿದರು.

ಸಿಪಿಐ(ಎಂ.ಎಲ್.) ಪಕ್ಷದ ಏಳನೇ ರಾಜ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಅವರು ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ದೇಶಕ್ಕೆ ಬಂಡವಾಳ ಯಥೇಚ್ಚವಾಗಿ ಹರಿದು ಬರುತ್ತಿರುವುದು ಭ್ರಷ್ಟಾಚಾರ ಹೆಚ್ಚಲು ಕಾರಣವಾಗುತ್ತಿದೆ. ದೇಶದಲ್ಲಿ ಮಾನವ ಶ್ರಮ, ಸಂಪನ್ಮೂಲ ಲೂಟಿಯಾಗುತ್ತಿದೆ. ದೇಶದ ಸಂಪತ್ತನ್ನು ಲೂಟಿ ಮಾಡಿದ ವಿವಿಧ ಕಂಪೆನಿ ಮತ್ತು ಅದರ ಮಾಲೀಕರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಜಾರಿಗೆ ತಂದ ಭೂಸುಧಾರಣೆ ಕಾನೂನು ಕಾಗದದಲ್ಲೆ ಉಳಿದಿದೆ. ಇದು ಭೂಮಾಲೀಕರ ಪರ ವಾಗಿದೆ. ನಿಜವಾದ ಭೂ ಸುಧಾರಣೆ ಕಾನೂನನ್ನು ಮಲೆನಾಡು ಭಾಗದಲ್ಲಿ ಜಾರಿಗೊಳಿಸಬೇಕು.
ಮಲೆನಾಡು ಭಾಗದಲ್ಲಿರುವ ಹೆಚ್ಚು ವರಿ ಭೂಮಿ ವಶಪಡಿಸಿಕೊಂಡು ಬಡವ ರಿಗೆ ಹಂಚಬೇಕು ಎಂದು ಆಗ್ರಹಿಸಿದರು.

ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ-ಲೆನಿನ್‌ವಾದಿ) 9ನೇ ಮಹಾ ಅಧಿವೇಶನ ನವೆಂಬರ್ 7ರಿಂದ 12ರವರೆಗೆ ಒಡಿಶಾದ ಭುವನೇಶ್ವರದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ದಿನೇ ದಿನೇ ದೇಶದ ದುಡಿಯುವ ವರ್ಗದ ಮೇಲೆ ಕ್ರೂರ ನೀತಿ ಮುಂದುವರಿಸಿದೆ. ಬೆಲೆ ಏರಿಕೆ ನಿಯಂತ್ರಿಸಲಾಗದೆ ಏರು ಗತಿ ತಲುಪಿದೆ. ಕೇಂದ್ರ ಭೂಸ್ವಾಧೀನ ಕಾಯ್ದೆ ಬ್ರಿಟಿಷ್ ಕಾಯ್ದೆಗಿಂತ ಅಪಾಯಕಾರಿ ಯಾಗಿದೆ ಎಂದು ಕಿಡಿಕಾರಿದರು. ಕೇಂದ್ರ ಕಾರ್ಯನಿರ್ವಾಹಕ ಸಮಿತಿ ಆರ್.ಮಾನಸಯ್ಯ, ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.