ADVERTISEMENT

ಕನ್ನಡ ಉಳಿಸುವುದು ಎಲ್ಲರ ಜವಾಬ್ದಾರಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2012, 19:30 IST
Last Updated 18 ಜೂನ್ 2012, 19:30 IST

ಮೂಡಿಗೆರೆ: ~ಕನ್ನಡವನ್ನು ಉಳಿಸುವುದು ಕನ್ನಡ ನಾಡಿನ ಪ್ರತಿಯೊಬ್ಬರ ಕರ್ತವ್ಯ~ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎನ್.ಎಸ್.ಶಿವಸ್ವಾಮಿ ಹೇಳಿದರು.

ಪಟ್ಟಣದ ಬೇಲೂರು ರಸ್ತೆಯಲ್ಲಿ ನೂತನ ಕಚೇರಿಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಕಾರ್ಯಕ್ಕೆ ಪದವಿ ಸ್ಥಾನಗಳೇ ಬೇಕು ಎಂದೇನಿಲ್ಲ. ಯಾರು ಪದವಿ, ಸ್ಥಾನಗಳಿಲ್ಲದಿದ್ದರೂ ಕನ್ನಡವನ್ನು ಕಟ್ಟುವ ಕಾರ್ಯ ಮಾಡುತ್ತಾನೋ ಅವನೇ ನಿಜವಾದ ಕನ್ನಡಿಗ ಎಂದರು.

ನಾಡಿನ ಮೂಲೆ ಮೂಲೆಯಲ್ಲಿರುವ ಕನ್ನಡ ಸಂಪನ್ಮೂಲ ವ್ಯಕ್ತಿಗಳ ವಿಚಾರಗಳನ್ನು ಪ್ರತಿಯೊಬ್ಬ ಕನ್ನಡಿಗರಿಗೂ ತಲುಪಿಸುವ ಕಾರ್ಯ ನಡೆಯಬೇಕಿದ್ದು, ಆ ಕಾರ್ಯವನ್ನು ಕಸಾಪ ನಿರ್ವಹಿಸುತ್ತದೆ ಎಂದು ತಿಳಿಸಿದರು.

ಕಸಾಪ ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಎಂ.ಎಸ್. ಅಶೋಕ್ ಮಾತನಾಡಿ, ತಾಲ್ಲೂಕಿನಲ್ಲಿ ಪ್ರತಿಭಾವಂತರಿಗೇನೂ ಕೊರತೆ ಇಲ್ಲ. ಆದರೆ ಅಂತಹ ಪ್ರತಿಭಾವಂತರನ್ನು ಗುರುತಿಸಿ ಬೆಳೆಸಿ ನಾಡಿಗೆ ಅವರ ಪ್ರಯೋಜನ ದೊರಕಿಸಿ ಕೊಡಬೇಕು ಎಂದರು. ಕನ್ನಡವನ್ನು ಬೆಳೆಸಲು ಎಲ್ಲಾ ಸಂಘ ಸಂಸ್ಥೆಗಳು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಕಸಾಪ ತಾಲ್ಲೂಕು ಘಟಕದ ಪದಾಧಿಕಾರಿಗಳಾದ ಎಂ. ಚಂದ್ರಶೇಖರ ಗೌಡ, ಹೊರಟ್ಟಿ ರಘು ಮಾತನಾಡಿದರು. ಇದೇ ವೇಳೆ ಕಸಾಪ ತಾಲ್ಲೂಕು ಘಟಕದ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಗೊಳಿಸಲಾಯಿತು. ಆದರ್ಶ, ಗೌಡಹಳ್ಳಿ ಪ್ರಸನ್ನ, ನಾಗರಾಜು, ಸುರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.