ADVERTISEMENT

ಕಿರುಅರಣ್ಯ ಉತ್ಪನ್ನಕ್ಕೆ ಉತ್ತೇಜನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 8:50 IST
Last Updated 17 ಸೆಪ್ಟೆಂಬರ್ 2011, 8:50 IST
ಕಿರುಅರಣ್ಯ ಉತ್ಪನ್ನಕ್ಕೆ ಉತ್ತೇಜನ
ಕಿರುಅರಣ್ಯ ಉತ್ಪನ್ನಕ್ಕೆ ಉತ್ತೇಜನ   

ಕೊಪ್ಪ: ಕಿರು ಅರಣ್ಯ ಉತ್ಪನ್ನಗಳ ವ್ಯವಹಾರವನ್ನು ಹೆಚ್ಚಿಸಲು ಲ್ಯಾಪ್ ಸಹಕಾರ ಸಂಘದ ಎಲ್ಲಾ ಸದಸ್ಯರು ತಾವು ಸಂಗ್ರಹಿಸಿದ ಅರಣ್ಯ ಉತ್ಪನ್ನಗಳನ್ನು ನೇರವಾಗಿ ಸಂಘಕ್ಕೆ ಸರಬರಾಜು ಮಾಡಲು ಅರಿವು ಮೂಡಿಸಲು ಸ್ತ್ರಿಶಕ್ತಿ ಸಂಘಗಳಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು ಲ್ಯಾಂಪ್ ಸಹಕಾರ ಸಂಘದ ಅಧ್ಯಕ್ಷ ಡಿ.ಎಫ್.ಒ. ಮಂಜುನಾಥ್ ಚೌಹಾಣ್ ಹೇಳಿದರು

ಇಲ್ಲಿನ ಬಾಳಗಡಿಯ ಒಕ್ಕಲಿಗರ ಸಮು ದಾಯ ಭವನದಲ್ಲಿ ಶುಕ್ರವಾರ ನಡೆದ ಲ್ಯಾಂಪ್ ಸಹಕಾರ ಸಂಘದ  ವಾರ್ಷಿಕ ಮಹಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘ ಪ್ರಸಕ್ತ ಸಾಲಿನಲ್ಲಿ ರೂ.21ಲಕ್ಷ ಲಾಭ ಗಳಿಸಿ ರಾಜ್ಯದ ಅತ್ಯುತ್ತಮ ಸಹಕಾರ ಸಂಘ ವಾಗಿ ಎ ದರ್ಜೆಯಲ್ಲಿ ಮುಂದುವರೆದಿದೆ ಎಂದರು. ಪೊನ್ನಂಪೇಟೆ ಅರಣ್ಯಕಾಲೇಜಿನ ಉಪ ನ್ಯಾಸಕ ರಾಮಕೃಷ್ಣ ಹೆಗಡೆ ಮಾತನಾಡಿ, ರಾಜ್ಯದ ಕಿರು ಅರಣ್ಯ ಉತ್ಪನ್ನಗಳ ಸಂಗ್ರಹದಲ್ಲಿ ಶೆ 30ರಷ್ಟು ನರ್ವಹಿಸುತ್ತಿರುವ ಇಲ್ಲಿನ ಸಂಘ ರೂ.1.38ಕೋಟಿ ವಹಿವಾಟು ಮಾಡುತಿದ್ದು ಅರಣ್ಯ ಉತ್ಪನ್ನಗಳ ಮೌಲ್ಯ ವರ್ಧನೆ, ಸಂಸ್ಕರಣೆ, ಹಾಗೂ ಸುಸ್ಥಿರ ನಿರ್ವಹಣೆಗೆ ಆಧ್ಯ ಗಮನಹರಿಸ ಬೇಕು ಎಂದರು

ಲ್ಯಾಂಪ್ ನಿರ್ದೇಶಕ ಮರಿಯಪ್ಪ, ನಿರ್ದೇಶಕ ಕೆ.ವಿ.ಚಂದ್ರಶೇಖರ್ ಮಾತನಾಡಿ ದರು.
ಸಂಘದ ಉಪಾಧ್ಯಕ್ಷ ಕೆಂಪಣ್ಣ, ನಿರ್ದೇಶಕರಾದ ಚಂದ್ರನಾಯಕ, ನಾರಾಯಣ ನಾಯಕ, ವಿಶಾಲಾಕ್ಷಿ, ಕೆಂಪೇಗೌಡ್ಲು, ಜಯರಾಮ, ಮಹೇಶ್, ಅಶೋಕ್, ಮಂಜುನಾಥ ನಾಯಕ, ವನಜ, ವ್ಯವಸ್ಥಾಪಕ ಸಿತಾರಾಮ ರೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.