ADVERTISEMENT

ಕುಂಟುತ್ತಾ ಸಾಗಿದ ಕಾಮಗಾರಿ

ಎಚ್.ಎನ್.ಸತೀಶ್ ಜೈನ್
Published 21 ಜನವರಿ 2012, 5:50 IST
Last Updated 21 ಜನವರಿ 2012, 5:50 IST

ಬಾಳೆಹೊನ್ನೂರು: ಇಲ್ಲಿನ ಸರ್ಕಾರಿ ಪ್ರೌಢಶಾಲೆಗೆ ಹೆಚ್ಚುವರಿ 5 ಕೊಠಡಿಗಳನ್ನು ನಿರ್ಮಿಸಲು ಜಿಲ್ಲಾ ಪಂಚಾಯಿತಿ ಹಣ ಬಿಡುಗಡೆ ಮಾಡಿ ಐದು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳ್ಳದೆ ಇನ್ನೂ ಕುಂಟುತ್ತಾ ಸಾಗಿದೆ.

ಪ್ರೌಢಶಾಲೆಯಲ್ಲಿ ಸುತ್ತಮುತ್ತಲಿನ ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿ ಗಳು ವ್ಯಾಸಂಗ ಮಾಡುತ್ತಿದ್ದು, ಕೊಠಡಿ ಕೊರತೆ ಕಂಡು ಬಂದಿತ್ತು. ಸಮಸ್ಯೆ ಗಮನಿಸಿದ ಜಿಲ್ಲಾ ಪಂಚಾಯಿತಿ ಸದಸ್ಯರು 2007-08 ನೇ ಸಾಲಿನ ಜಿಲ್ಲಾ ಪಂಚಾಯಿತಿ ನಿಧಿ ಅಡಿಯಲ್ಲಿ ಕಾಮಗಾರಿ ನಡೆಸಲು 9 ಲಕ್ಷ ರೂ ಹಣ ಬಿಡುಗಡೆ ಮಾಡಿಸಿದ್ದರು.

ಅದರೆ 2008 ರವರೆಗೂ ಯಾರೂ ಕಟ್ಟಡ ಕಾಮಗಾರಿ ನಿರ್ವಹಿಸಲು ಬಾರದ ಹಿನ್ನೆಲೆಯಲ್ಲಿ 2008 ರ ನ. 5 ರಂದು ನಡೆದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ಕಾಮಗಾರಿ ಅನುಷ್ಠಾನವನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸುವ ಬಗ್ಗೆ ನಿರ್ಣಯಿಸಿ ನಂತರ ಜಿಲ್ಲಾ  ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅನುಮೋದಿ ಸಲಾಗಿತ್ತು.

ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸುವ ವೇಳೆ ಅಂದಾಜು ವೆಚ್ಚ ವನ್ನು 18 ಲಕ್ಷಕ್ಕೆ ಏರಿಸಲಾಗಿದ್ದು, 2009 ರ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗ ಸೂಚಿಸಿತ್ತು.
ಅದರೆ ಕಾಮಗಾರಿ ಐದು ವರ್ಷಗಳಿಂದ ಸಕುಂಟುತ್ತಾ ಸಾಗಿದ್ದು ಇದುವರೆಗೂ ಪೂರ್ಣಗೊಂಡಿಲ್ಲ.
 
ಇದರ ನಡುವೆ ಐದು ಕೊಠಡಿ ನಿರ್ಮಿಸಲು ಯೋಜನೆಯಲ್ಲಿ ಅನುಮತಿ ನೀಡಲಾಗಿದ್ದರೂ ಕೇವಲ ನಾಲ್ಕು ಕೊಠಡಿಗಳು ಮಾತ್ರ ನಿರ್ಮಾಣ ಹಂತದಲ್ಲಿವೆ. ಎಂಬ ಅಂಶ ಮಾಹಿತಿ ಹಕ್ಕಿನ ಅಡಿಯಲ್ಲಿ ಪ್ರವೀಣ್ ಡಿಸೋಜ ಎಂಬುವ ವರು ಪಡೆದ ದಾಖಲೆಯಲ್ಲಿ ಬಹಿರಂಗ ಗೊಂಡಿದೆ.

ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಗಳು ಕೊಠಡಿ ಕೊರತೆ  ಯಿಂದಾಗಿ ತೀವ್ರ ತೊಂದರೆ  ಆನುಭವಿಸುತ್ತಿದ್ದು, ಶಿಕ್ಷಕರ ಪಾಠ ಪ್ರವಚನಕ್ಕೂ ಅಡಚಣೆ ಉಂಟಾಗಿದೆ. ಐದು ವರ್ಷ ಗಳಿಂದ ಕಾಮಗಾರಿ ಕುಂಟುತ್ತಾ ಸಾಗಿದ್ದರೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಇತ್ತ ತಿರುಗಿಯೂ ನೋಡಿಲ್ಲ ಎನ್ನುತ್ತಾರೆ ಪೋಷಕರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.