ADVERTISEMENT

ಚಾರ್ಮಾಡಿ: ಕೊಳೆತ ಶವ ಪತ್ತೆ ವಜ್ರದ ವ್ಯಾಪಾರಿ ದೇಹ ಶಂಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 5:55 IST
Last Updated 10 ಫೆಬ್ರುವರಿ 2012, 5:55 IST

ಮೂಡಿಗೆರೆ: ತಾಲ್ಲೂಕಿನ ಬಣಕಲ್ ಠಾಣಾ ವ್ಯಾಪ್ತಿ ಚಾರ್ಮಾಡಿ ಘಾಟಿಯ ಸೋಮನಕಾಡು ಬಳಿ ಅಣ್ಣಪ್ಪಸ್ವಾಮಿ ದೇವಾಲಯದಿಂದ 2 ಕಿ.ಮೀ. ದೂರ ಕಂದಕವೊಂದರಲ್ಲಿ ಕೊಳೆತ ಪುರುಷನ ಶವ ಗುರುವಾರ ಮಧ್ಯಾಹ್ನ ಪತ್ತೆಯಾಗಿದೆ.

ಬೆಂಗಳೂರಿನ ಚಿನ್ನದ ವ್ಯಾಪಾರಿ ಯೊಬ್ಬರ ನಾಪತ್ತೆ ಪ್ರಕರಣದಲ್ಲಿ ಶೋಧ ಕಾರ್ಯ ಹಮ್ಮಿಕೊಂಡಿದ್ದ ಬೆಂಗಳೂರಿನ ಸಿಸಿಬಿ ಪೊಲೀಸರು, ಹಾಸನ ಜಿಲ್ಲೆ ಸಕಲೇಶಪುರ ವ್ಯಾಪ್ತಿ ಯ ಶಿರಾಡಿ ಘಾಟಿ ಮತ್ತು ಚಿಕ್ಕಮ ಗಳೂರು-ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಗೆ ಬರುವ ಚಾರ್ಮಾಡಿ ಘಾಟಿ ಯಲ್ಲಿ ಗುರುವಾರ ಬೆಳಗಿನಿಂದಲೇ ಪತ್ತೆ ಕಾರ್ಯದಲ್ಲಿ ತೊಡಗಿದ್ದರು. ಶವ ಪತ್ತೆಯಾದ ಬಳಿಕ ಮೂಡಿಗೆರೆ ವೈದ್ಯಾಧಿಕಾರಿಯಿಂದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಬೆಂಗಳೂರಿನ ಆಭರಣ ವರ್ತಕ ರೊಬ್ಬರು ಇದೇ 7ರಂದು ದುಬೈಗೆ ಹೋಗಲು ಚಿನ್ನ- ವಜ್ರದ ಆಭರಣಗಳೊಂದಿಗೆ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ನಾಪತ್ತೆಯಾಗಿದ್ದರು. ಬೆಂಗಳೂರು ಸಿಸಿಬಿ ಪೊಲೀಸರು ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ದೊರೆತ ಮಾಹಿತಿ ಮೇರೆಗೆ ಶವ ಪತ್ತೆ ಹಚ್ಚಲಾಗಿದೆ.

ಸೋಮನಕಾಡು ಬಳಿ ಪತ್ತೆ ಯಾಗಿರುವುದು ವಜ್ರದ ವ್ಯಾಪಾರಿಯ ಶವ ಎಂದು ಅಂದಾಜು ಮಾಡ ಲಾಗಿದ್ದು, ಇನ್ನಷ್ಟೇ ಖಚಿತವಾಗ ಬೇಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.