ADVERTISEMENT

ಜಿಎಸ್‌ಎಲ್‌ವಿಎಂಕೆ-3 ಉಡಾವಣೆಗೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2012, 8:30 IST
Last Updated 16 ನವೆಂಬರ್ 2012, 8:30 IST

ಚಿಕ್ಕಮಗಳೂರು: ಮುಂದಿನ ದಿನಗಳಲ್ಲಿ ಅನೇಕ ಕುತೂಹಲಕಾರಿ ಉಪಗ್ರಹಗಳನ್ನು ಉಡಾವಣೆ ಮಾಡಿ ಜನರ ಉಪಯೋಗಕ್ಕೆ ಕಲ್ಪಿಸಲಾಗುವುದು ಎಂದು ಬೆಂಗಳೂರು ಇಸ್ರೊ ಉಪಗ್ರಹ ಕೇಂದ್ರದ ನಿರ್ದೇಶಕ ಎಸ್.ಕೆ.ಶಿವಕುಮಾರ್ ತಿಳಿಸಿದರು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ನಗರದ ಆದಿಚುಂಚನಗಿರಿ ತಾಂತ್ರಿಕ ಕಾಲೇಜಿನ ಸಹಯೋಗದಲ್ಲಿ ಗುರುವಾರ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ಅಂತರಿಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಉಪಯೋಗ~ ಉಪ ನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರು ವಿಕ್ರಮ್ ಸಾರಾಬಾಯಿ ಪ್ರಾಧ್ಯಾಪಕ ಬಿ.ಎನ್.ಸುರೇಶ್ ಮಾತನಾಡಿ ದೇಶದ ಕೃಷಿ, ರಕ್ಷಣೆ, ಹವಾಮಾನ, ದೂರದರ್ಶನ, ಮೊಬೈಲ್, ವ್ಯಾಪಾರ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಎದುರಾಗುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಉಪಗ್ರಹ ಉಡಾವಣೆ ಅವಶ್ಯಕ ಎಂದರು.

ಟಿಪ್ಪು ಸುಲ್ತಾನನ ಕಾಲದಲ್ಲಿಯೇ ಒಂದೂವರೆ ಕಿ.ಮೀ. ದೂರ ಕ್ರಮಿಸಬಲ್ಲ ಮೂರುವರೆ ಕೆ.ಜಿ.ತೂಕದ ಉಪಗ್ರಹವನ್ನು ಬಿದಿರು ಬೊಂಬಿನಲ್ಲಿ 2 ಕೆ.ಜಿ. ಗನ್‌ಪೌಡರ್ ತುಂಬಿ ರಾಕೆಟ್‌ನಂತೆ ಬಳಸಲಾಗಿತ್ತು. ಮುಂದಿನ ವರ್ಷ ಜಿಎಸ್‌ಎಲ್‌ವಿಎಂಕೆ-3 ಎಂಬ ಅತ್ಯಾಧುನಿಕ  ಉಪಗ್ರಹ ಉಡಾವಣೆಗೆ ತಯಾರಿ ನಡೆಸಲಾಗಿದೆ ಎಂದು ವಿವರಿಸಿದರು.

ಬೆಂಗಳೂರು ಇಸ್ರೋ ಉಪಗ್ರಹ ಕೇಂದ್ರದ ಪ್ರಾಧ್ಯಾಪಕ ಜಯರಾಮ್ ಉಪಗ್ರಹ ಉಪಯೋಗ ಗಳ ಬಗ್ಗೆ ವಿವರಿಸಿದರು.

ಪ್ರಾಂಶುಪಾಲ ಸಿ.ಕೆ.ಸುಬ್ಬರಾಯ ಮಾತನಾಡಿ, ಉಪಗ್ರಹ ಕ್ಷೇತ್ರದ ಸಂಶೋಧನೆ ಮತ್ತು ಉಡಾ ವಣೆಯಲ್ಲಿ ವಿಶ್ವದಲ್ಲಿಯೇ ನಮ್ಮದು ಪ್ರತಿಷ್ಠಿತ  ರಾಷ್ಟ್ರ ಎಂದರು. ಪ್ರಾಧ್ಯಾಪಕರಾದ ಎನ್.ಡಿ.ದಿನೇಶ್,  ಮಲ್ಲಿಕಾರ್ಜುನ, ಸಿ.ಟಿ.ಜಯದೇವ್ ಹಾಜರಿದ್ದರು. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.