ADVERTISEMENT

ತರೀಕೆರೆ: ರಸ್ತೆಯಲ್ಲಿ ಗುಂಡಿ, ಸಂಚಾರ ಹರಸಾಹಸ

ಟಿ.ಎಂ.ವಿಜಯಕುಮಾರ್
Published 4 ಏಪ್ರಿಲ್ 2012, 8:35 IST
Last Updated 4 ಏಪ್ರಿಲ್ 2012, 8:35 IST

ತರೀಕೆರೆ: ತರೀಕೆರೆ ತಾಲ್ಲೂಕಿನಲ್ಲಿ ರಾಜ್ಯ ಸರ್ಕಾರದ ವಿಶೇಷ ಅನುದಾನದಲ್ಲಿ ರೂ15 ಕೋಟಿ ಹಣದಲ್ಲಿ ಗ್ರಾಮಾಂತರ ರಸ್ತೆಗಳ ಅಭಿವೃದ್ಧಿಯಾಗಿದೆ ಮತ್ತು ಲೋಕೋಪಯೋಗಿ ಇಲಾಖೆಯಿಂದ ರೂ 9 ಕೋಟಿಗೂ ಅಧಿಕ ಮೊತ್ತದ ರಸ್ತೆ ಕಾಮಗಾರಿ ನಡೆದಿದ್ದರೂ ಕೆಲವು ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳು ಗುಂಡಿ ಗೊಟರುಗಳಿಂದ ಕೂಡಿದ್ದು, ಸಂಚರಿಸಲು ಜನತೆ ಹರಸಹಾಸ ಪಡಬೇಕಿದೆ.

ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 60ಕ್ಕೂ ಹೆಚ್ಚು ಕಿ.ಮಿ. ಗ್ರಾಮೀಣ ಪ್ರದೇಶದ ರಸ್ತೆಯನ್ನು ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಉಪ ವಿಭಾಗ ತಾಲ್ಲೂಕಿನಲ್ಲಿ ನಿರ್ಮಿಸಿದೆ. ಈ ಭಾಗಗಳಲ್ಲಿ ಬರುವ ಸೇತುವೆಗಳ ನಿರ್ಮಾಣ ಮತ್ತು ದುರಸ್ತಿಯನ್ನು ಇಲಾಖೆ ಕೈಗೊಂಡಿದೆ.

ಲೋಕೋಪಯೋಗಿ ಇಲಾಖೆ ವಿಶೇಷ ಘಟಕ ಯೋಜನೆಯಡಿ ತಾಲ್ಲೂಕಿನಲ್ಲಿ ಜಿಲ್ಲಾ ಮುಖ್ಯರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದ್ದು, ರೂ 9.5 ಕೋಟಿಹಣದಲ್ಲಿ 7ರಸ್ತೆಯನ್ನು ನಿರ್ಮಿಸಿದೆ. ಕಳೆದ ವರ್ಷದಲ್ಲಿ ಹೆಚ್ಚಾಗಿ ಬಿದ್ದ ಮಳೆಯಿಂದ ರಸ್ತೆಗಳ ಗುಣಮಟ್ಟ ಹಾಳಾಗಿದ್ದು, ಅದನ್ನು ದುರಸ್ತಿ ಮಾಡುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅಂಕಿಂಶಗಳು ಏನೆ ಇದ್ದರೂ ಗ್ರಾಮೀಣ ಪ್ರದೇಶವನ್ನು ಸಂಪರ್ಕಿಸುವ ಹಳಿಯೂರು  ಕೆರೆಹೊಸಳ್ಳಿ ರಸ್ತೆ ತರೀಕೆರೆ-ಯಲುಗೆರೆ-ದುಗ್ಲಾಪುರ ರಸ್ತೆ ನಿರ್ಮಾಣವಾಗದೆ  ಜನತೆ ಪರಿತಪಿಸುವಂತಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.