ನರಸಿಂಹರಾಜಪುರ: ಇಲ್ಲಿನ ಪ್ರವಾಸಿ ಮಂದಿರದ ಬಳಿ ₹2ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಕೋಟೆ ಮಾರಿಕಾಂಬ ದೇವಸ್ಥಾನದ ಮುಂಭಾಗದ ದೀಪಸ್ತಂಭಕ್ಕೆ ₹20ಲಕ್ಷ ವೆಚ್ಚದ ಚಿನ್ನದ ಲೇಪನ ಅಳವಡಿಸುವ ಕಾರ್ಯ ಕ್ರಮ ಶನಿವಾರ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.
ಚಿನ್ನದ ಲೇಪನವನ್ನು ದಾನವಾಗಿ ನೀಡಿದ ವಿಧಾನ ಪರಿಷತ್ ಸದಸ್ಯ ಎಂ.ಶ್ರೀನಿವಾಸ್ ದೀಪಸ್ತಂಭಕ್ಕೆ ಚಿನ್ನದ ಲೇಪನ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ನಿವೃತ್ತ ಕನ್ನಡ ಪಂಡಿತ ವಿ.ಎಸ್. ಕೃಷ್ಣಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿದ ವು. ಭಕ್ತಾ ಧಿಗಳು ಧಾನ್ಯವನ್ನು ದೀಪಸ್ತಂಭದ ಒಳಗೆ ಹಾಕಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಕೋಟೆ ಮಾರಿಕಾಂಬ ದೇವಸ್ಥಾನ ನಿರ್ಮಾಣ ಸಮಿತಿಯ ಅಧ್ಯಕ್ಷ ಕೆ.ವಿ. ವಸಂತಕುಮಾರ್, ಕಾರ್ಯದರ್ಶಿ ಇಂದು ಶೇಖರ್, ಉಪಾಧ್ಯಕ್ಷ ಕೆ.ಪಿ.ಸುರೇಶ್ ಕುಮಾರ್, ಹೂವಪ್ಪ, ಸಹ ಕಾರ್ಯ ದರ್ಶಿ ಕೃಷ್ಣಮೂರ್ತಿ, ಖಜಾಂಚಿ ವೆಂಕ ಟೇಶ್, ಸಹ ಖಜಾಂಚಿ ಕೃಷ್ಣ ಆಚಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಸುಜಾತಾ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೇಖಾ ವಸಂತ್, ಸದಸ್ಯರಾದ ಲಕ್ಷ್ಮಣ್ ಶೆಟ್ಟಿ, ಸುನಿಲ್ ಕುಮಾರ್, ದೇವಸ್ಥಾನ ಸಮಿತಿಯ ಸದಸ್ಯರು ಹಾಗೂ ಭಕ್ತರು ಭಾಗವಹಿಸಿದ್ದರು. ಚಿನ್ನದ ಲೇಪನವಿರುವ 15 ಕಳಶಗಳನ್ನು ನಿರ್ಮಿಸಿದ ತಮಿಳುನಾಡಿನ ಶಬರಿಯ ಶಿಲ್ಪಿಯನ್ನು ಸಮಿತಿವತಿ ಯಿಂದ ಅಭಿನಂದಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.