ADVERTISEMENT

`ನೀರಾವರಿ ಸೌಲಭ್ಯಕ್ಕೆ ಸರ್ವೋದಯ ಬೆಂಬಲಿಸಿ'

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 6:27 IST
Last Updated 25 ಏಪ್ರಿಲ್ 2013, 6:27 IST

ಅಜ್ಜಂಪುರ: ಭದ್ರಾ ಜಲಾಶಯದಿಂದ ತಾಲ್ಲೂಕಿನ ಪ್ರತಿ ಗ್ರಾಮದ ಕೃಷಿ ಭೂಮಿಗೆ ನೀರು ಹರಿಸುವ, ಪಟ್ಟಣ ಮತ್ತು ಹಳ್ಳಿಗೂ ಶುದ್ಧ ಕುಡಿಯುವ ನೀರು ಕಲ್ಪಿಸುವ, ಬಡತನ ನಿರ್ಮೂಲನೆ ಮಾಡುವ, ಮಹಿಳೆಯರ ರಕ್ಷಣೆ ಮತ್ತು ಆರ್ಥಿಕಾಭಿವೃದ್ಧಿಗೆ ನೆರವು ಒದಗಿಸುವ ಧ್ಯೇಯೋದ್ದೇಶ ಹೊಂದಿರುವ ಸರ್ವೋದಯ ಕರ್ನಾಟಕ ಪಕ್ಷಕ್ಕೆ ಮತನೀಡಿ ಎಂದು ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಉಪಾಧ್ಯಕ್ಷ ಸಿದ್ದಪ್ಪ ಪಟ್ಟಣದ ಬಸ್ ನಿಲ್ದಾಣ ಸಮೀಪ ಬುಧವಾರ ಮತಯಾಚನೆ ಸಂದರ್ಭದಲ್ಲಿ ಕರೆನೀಡಿದರು.

ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದೋರನಾಳ್ ಡಿ.ಸಿ.ಸುರೇಶ್, ರೈತ ಸಂಘ ಇದುವರೆಗೂ ಭೀಮನಹಳ್ಳ, ಗಾಣಗಿತ್ತಿ ಹಳ್ಳ ಯೋಜನೆಗೆ ಚಾಲನೆ ದೊರಕಿಸಿಕೊಡುವ ಮೂಲಕ ಮುಂದಿನ ದಿನಗಳಲ್ಲಿ ಶಿವನಿ, ಬುಕ್ಕಾಂಬುದಿ, ಲಿಂಗದಹಳ್ಳಿ ಹೋಬಳಿಗೆ ಶುದ್ಧ ನೀರು ಲಭ್ಯವಾಗಲು ಕಾರಣವಾಗಿದೆ.

ಭದ್ರಾ ಮೇಲ್ದಂಡೆ ಯೋಜನೆಗೆ ತಡೆಯೊದ ಗಿಸುವ ಮೂಲಕ ಕ್ಷೇತ್ರದ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ ಎಂದರು.ಮನು, ತಿಪ್ಪೇಶಪ್ಪ, ಷಡಕ್ಷರಿ, ಮಂಜುನಾಥ್ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT