ADVERTISEMENT

ನೀರು ಸ್ಥಗಿತ: ಜಾಕ್‌ವೆಲ್ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 8:40 IST
Last Updated 8 ಅಕ್ಟೋಬರ್ 2012, 8:40 IST

ಬೇಲೂರು: ಚಿಕ್ಕಮಗಳೂರು ನಗರಕ್ಕೆ ಇಲ್ಲಿನ ಯಗಚಿ ಜಲಾಶಯದ ಜಾಕ್‌ವೆಲ್‌ನಿಂದ ವಿವಿಧ ಸಂಘಟನೆಗಳ ಪ್ರತಿಭಟನಾಕಾರರು ನೀರು ಪೂರೈಕೆ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ಸಿ.ಆರ್.ಪ್ರೇಮ್‌ಕುಮಾರ್ ಹಾಗೂ ಸದಸ್ಯರು ಭಾನುವಾರ ಇಲ್ಲಿನ ಜಾಕ್‌ವೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಯಗಚಿ ಅಣೆಕಟ್ಟೆಯಿಂದ ತಮಿಳು ನಾಡಿಗೆ ನೀರು ಬಿಟ್ಟಿದ್ದರೂ ಚಿಕ್ಕಮ ಗಳೂರಿನ ಜನಪ್ರತಿನಿಧಿಗಳು ಪ್ರತಿಭಟ ನೆಗೆ ಬೆಂಬಲ ನೀಡಿಲ್ಲ ಎಂಬ ಕಾರಣ ಕ್ಕಾಗಿ ಬೇಲೂರಿನ ಪ್ರತಿಭಟನಾಕಾರರು ನೀರು ಸರಬರಾಜನ್ನು ಶನಿವಾರ ಸಂಜೆ ಸ್ಥಗಿತಗೊಳಿಸಿದ್ದರು.

ಪರಿಶೀಲನೆ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಪ್ರೇಮ್‌ಕುಮಾರ್ ಯಗಚಿ ಅಣೆಕಟ್ಟೆ ಯಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ವಿಚಾರ ತಿಳಿದ ತಕ್ಷಣವೇ ಉನ್ನತ ಶಿಕ್ಷಣ ಸಚಿವರಾದ ಸಿ.ಟಿ.ರವಿ ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಮಾತುಕತೆ ನಡೆಸಿದ ಹಿನ್ನೆಲೆಯಲ್ಲಿ ಸರ್ಕಾರ ಯಗಚಿಯಿಂದ ನೀರು ಬಿಡುಗಡೆ ಮಾಡುತ್ತಿರುವುದನ್ನು ಸ್ಥಗಿತಗೊಳಿಸಿದೆ ಎಂದರು. 

ಬೇಲೂರು, ಚಿಕ್ಕಮಗಳೂರು ಮತ್ತು ಅರಸೀಕೆರೆ ಪಟ್ಟಣಗಳ ಜನರ ಕುಡಿಯುವ ನೀರಿಗೆ ಯಗಚಿ ಜಲಾ ಶಯ ಪ್ರಮುಖ ಮೂಲವಾಗಿದೆ. ಈ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಬಿಟ್ಟಿರುವುದು ಖಂಡನೀಯ. ಎಂತಹ ಬರದ ಪರಿಸ್ಥಿತಿಯಲ್ಲೂ ಯಗಚಿಯಿಂದ ಹೇಮಾವತಿಗೆ, ಕೆಆರ್‌ಎಸ್‌ಗೆ ನೀರು ಹರಿಸಿರಲಿಲ್ಲ. ಮತ್ತೆ ಇಂತಹ ಘಟನೆ ಮರುಕಳಿಸಿದರೆ ಬೇಲೂರಿನ ವಿವಿಧ ಸಂಘಟನೆಗಳ ಕಾರ್ಯಕರ್ತರೊಂದಿಗೆ ಸೇರಿ ಚಿಕ್ಕಮಗಳೂರಿನ ಜನಪ್ರತಿ ನಿಧಿಗಳು ಮತ್ತು ಜನರು ಉಗ್ರ ಪ್ರತಿ ಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಯಗಚಿ ಜಲಾಶಯದ ಎಇಇ ಪುಟ್ಟೇಗೌಡ ಅವರೊಂದಿಗೂ ಈ ಸಂದರ್ಭದಲ್ಲಿ ಪ್ರೇಮ್‌ಕುಮಾರ್ ಮಾತುಕತೆ ನಡೆಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಪ್ಪ, ನಗರಸಭೆ ಸದಸ್ಯರಾದ ತಮ್ಮಯ್ಯ, ಲಿಂಗಣ್ಣ, ಶ್ರೀನಿವಾಸ್, ಬಿಜೆಪಿ ಮುಖಂಡ ವರಸಿದ್ದಿ ವೇಣುಗೋಪಾಲ್, ಬೇಲೂ ರು ಪುರಸಭೆ ಸದಸ್ಯರಾದ ಎಚ್.ಎಮ್.ದಯಾನಂದ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.