ಶೃಂಗೇರಿ: ಭತ್ತದ ಇಳುವರಿಯನ್ನು ಹೆಚ್ಚಿಸಲು ಭೂಚೇತನ ಕಾರ್ಯಕ್ರಮದ ಅಡಿ ರೈತರಿಗೆ ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ ನೀಡಲಾಗುವುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸತ್ಯನಾರಾಯಣ್ ಹೇಳಿದರು.
ತಾಲ್ಲೂಕಿನ ಮೆಣಸೆ ಗ್ರಾಮ ಪಂಚಾಯಿತಿಯ ಕೆರೆಮನೆ ಭಾಸ್ಕರ್ ರಾವ್ ಮನೆಯಲ್ಲಿ ಶುಕ್ರವಾರ ಭತ್ತದ ಬೀಜೋಪಚಾರ ಕುರಿತಾದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭತ್ತದ ಬೆಳೆಗೆ ಬೀಜದಿಂದಲೇ ಹರಡುವ ವಿವಿಧ ಕಾಯಿಲೆಗಳನ್ನು ತಡೆಗಟ್ಟಲು ಬೀಜೋಪಚಾರ ಮಾಡ ಬೇಕು. ಸಮರ್ಪಕವಾಗಿ ಬೀಜೋಪ ಚಾರ ಮಾಡಿದರೆ ನಂತರದ ಐವತ್ತು ದಿನಗಳವರೆಗೆ ರೋಗ ಕಾಣಿಸಿ ಕೊಳ್ಳುವುದಿಲ್ಲ.
ನಾಟಿಯಾದ ಭತ್ತದ ಸಸಿಗೆ ವಿಷಯುಕ್ತ ಔಷಧಿಗಳನ್ನು ಸಿಂಪಡಿಸಬಾರದು. ಇದರಿಂದ ನಾವು ಊಟ ಮಾಡುವ ಆಹಾರವೇ ವಿಷಯುಕ್ತ ವಾಗುವ ಕಾರಣ ರೈತರು ಸಾವಯವ ಕೃಷಿಯತ್ತ ಹೆಚ್ಚು ಗಮನ ಹರಿಸಬೇಕು ಎಂದರು.
ಭತ್ತದ ಇಳುವರಿ ಹೆಚ್ಚಿಸಲು ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದು, ರೈತರಿಗೆ ಸಸ್ಯ ಸಂರಕ್ಷಣೆಗೆ ಅಗತ್ಯವಾದ ಔಷಧಿಗಳು, ಟ್ರೈಕೋಡರ್ಮ ಮುಂತಾದವುಗಳನ್ನು ಸಹಾಯಧನದಲ್ಲಿ ನೀಡಲಾಗುತ್ತಿದೆ. ಭೂಚೇತನ ಕಾರ್ಯಕ್ರಮದ ಅಡಿ ರೈತರ ಜಮೀನಿನ ಮಣ್ಣು ಪರೀಕ್ಷೆ ನಡೆಸಿ ಮಣ್ಣಿನಲ್ಲಿ ಯಾವ ಅಂಶ ಕಡಿಮೆ ಇದೆ ಎಂದು ಪತ್ತೆಹಚ್ಚಿ ಲಘು ಪೋಷಕಾಂಶ ಗಳನ್ನು ನೀಡಲು ಸಲಹೆ ನೀಡಲಾಗು ವುದು.
ಮಲೆನಾಡಿನಲ್ಲಿ ರಸ ಸಾರ ಕಡಿಮೆ ಇರುವ ಕಾರಣ ಸುಣ್ಣವನ್ನು ನೀಡಲೇ ಬೇಕಾಗಿದೆ ಎಂದರು. ಮೆಣಸೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವಶಂಕರ್ ಅಧ್ಯಕ್ಷತೆ ವಹಿಸಿದ್ದರು. ರೈತ ಮಿತ್ರಕೂಟದ ಎಸ್.ಆರ್. ಸೂರ್ಯನಾರಾಯಣ ರಾವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.