ADVERTISEMENT

ರಾಷ್ಟ್ರಗೀತೆ ಸಜೀವತೆಯ ಕುರುಹು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2012, 9:50 IST
Last Updated 18 ಆಗಸ್ಟ್ 2012, 9:50 IST

ಚಿಕ್ಕಮಗಳೂರು: ರಾಷ್ಟ್ರಧ್ವಜ ದೇಶದ ಗೌರವ ಮತ್ತು ಕೀರ್ತಿ ಸಂಕೇತ ಎಂದು ಸೇವಾದಳ ಕ್ಷೇತ್ರಸಮನ್ವಯಾಧಿಕಾರಿ ರಾಜೇಗೌಡ ತಿಳಿಸಿದರು.ನಗರದ ಆಜಾದ್‌ಪಾರ್ಕ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸೇವಾದಳ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರಧ್ವಜ ದೇಶದ ಸ್ವಾತಂತ್ರ್ಯ ಮತ್ತು ಪಾವಿತ್ರ್ಯತೆ ಸಂಕೇತ. ಪ್ರತಿಯೊಬ್ಬ ನಿಷ್ಠಾವಂತ ದೇಶಪ್ರೇಮಿಯ ಹೃದ ಯಾಂತ ರಾಳದಿಂದ ಹೊರ ಹೊಮ್ಮುವ ಅಭಿಮಾನದ ಸೂಚಕ. ರಾಷ್ಟ್ರಗೀತೆ ದೇಶದ ಸಜೀವತೆಯ ಕುರುಹು. ಏಕತೆ ಸಾರುವ ಸಾಧನ. ಇದಕ್ಕೆ ಅಪಮಾನ ಮಾಡುವುದು ದೇಶದ್ರೋಹ ಎಂದರು.

ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದೇಗೌಡ ಮಾತನಾಡಿ, ದೇಶದ ಸಂಸ್ಕೃತಿ, ಕಲೆ, ನಾಡುನುಡಿಯ ಬಗ್ಗೆ ಪ್ರತಿಯೊಬ್ಬ ದೇಶಭಕ್ತರು ಅಂತರಾಳ ದಲ್ಲಿ ಅಭಿಮಾನ ಮೂಡಿಸಿಕೊಳ್ಳ ಬೇಕೆಂದು ಸಲಹೆ ನೀಡಿದರು.

ರಾಷ್ಟ್ರೀಯ ಭಾವೈಕ್ಯ ವೇದಿಕೆ ಕಾರ್ಯದರ್ಶಿ ಮಂಜುನಾಥ ಮಾತ ನಾಡಿ, ಮಕ್ಕಳು ದೇಶದ ಆಸ್ತಿ. ಅವರನ್ನು ಉತ್ತಮ ರೀತಿಯಲ್ಲಿ ಪೋಷಕರು ಬೆಳೆಸಬೇಕು. ಶಾಲೆಗೆ ಬರುವ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದರೊಂದಿಗೆ ಕ್ರೀಡೆ, ಯೋಗ, ಶಿಸ್ತು ಆರೋಗ್ಯ ಕುರಿತು ತರಬೇತಿ ನೀಡಬೇಕೆಂದು ಸಲಹೆ ನೀಡಿದರು. ಮುಖ್ಯಶಿಕ್ಷಕ ಲೋಕೇಶ್ವರಾ ಚಾರ್, ಸೇವಾದಳದ ವಿಭಾಗೀಯ ಸಂಘ ಟಕ ರವಿಶಂಕರ್, ಕುಮಾರಪ್ಪ, ರಂಗ ಬೋವಿ, ಶಿಕ್ಷಕರಾದ ನಾಗವೇಣಿ, ವಸಂತ, ಲಕ್ಷಮ್ಮ, ಜಯಂತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.