ADVERTISEMENT

ವೈದ್ಯರ ನೇಮಕ ಭರವಸೆ: ಧರಣಿ ಹಿಂದಕ್ಕೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 5:40 IST
Last Updated 4 ಜನವರಿ 2012, 5:40 IST

ಕಳಸ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ  ವೈದ್ಯರ ನೇಮಕಕ್ಕೆ ಒತ್ತಾಯಿಸಿ ಸಿ.ಪಿ.ಐ ನಡೆಸುತ್ತಿರುವ ಮುಷ್ಕರ ಮಂಗಳವಾರ ಕೊನೆಗೊಂಡಿತು.

ಸೋಮವಾರ ಸಿ.ಪಿ.ಐ. ಆರಂಭಿಸಿದ್ದ ಚಳವಳಿಗೆ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆಯು ಬೆಂಬಲ ಸೂಚಿಸಿತು. ಚಳವಳಿ ನಡೆಯುತ್ತಿದ್ದ ನಾಡಕಚೇರಿ ಆವರಣಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮಂಗಳ ವಾರ ಭೇಟಿ ನೀಡಿದಾಗ ರಕ್ಷಣಾ ವೇದಿಕೆಯ ಮುಖಂಡರಾದ ಶುಕೂರ್, ರವಿ ರೈ, ಶ್ರೇಣಿಕ ಮತ್ತಿತರರು ಅವರನ್ನು ತರಾಟೆಗೆ ತೆಗೆದುಕೊಂಡರು.

ಎರಡೇ ದಿನದಲ್ಲಿ ಕಳಸ ಆಸ್ಪತ್ರೆಗೆ ಬೇರೆಡೆ ಯಿಂದ ವೈದ್ಯರ ನಿಯೋಜನೆ ಮಾಡುವ ಭರವಸೆಯನ್ನು ಜಿಲ್ಲಾ ವೈದ್ಯಾಧಿಕಾರಿಗಳು ನೀಡಿದರು. 45 ದಿನದಲ್ಲಿ ಖಾಯಂ ವೈದ್ಯರನ್ನು ನೇಮಿಸುವ ಮತ್ತು ದಂತ ವೈದ್ಯರನ್ನು ನಿಯೋಜಿಸುವ ಭರವಸೆಯನ್ನೂ ಅವರು ನೀಡಿದರು.

ಕಳಸಕ್ಕೆ ಪ್ರಯೋಗಾಲಯ ತಂತ್ರಜ್ಞರನ್ನು ಕೂಡಲೇ ನೇಮಿಸಲು ಮತ್ತು ಸಮರ್ಪಕ ವಾಗಿ ಕಾರ್ಯನಿರ್ವಹಿಸದ ಕಣ್ಣಿನ ಪರೀ ಕ್ಷಕರ ಬದಲು ಬೇರೊಬ್ಬರನ್ನು ನೇಮಿಸಲೂ ಆರೋಗ್ಯ ಅಧಿಕಾರಿ ಒಪ್ಪಿಕೊಂಡರು.

  ನಿವೇಶನರಹಿತರಿಗೆ ನಿವೇಶನ ವಿತರಿಸಲು ಇರುವ ಅಡ್ಡಿಗಳನ್ನು ನಿವಾರಿಸಲು ಕ್ರಮ ತೆಗೆದುಕೊಳ್ಳುವುದಾಗಿ ಸ್ಥಳಕ್ಕೆ ಭೇಟಿ ನೀಡಿದ ತಾ.ಪಂ. ಅಧ್ಯಕ್ಷ ರಂಜನ್ ಅಜಿತ್‌ಕುಮಾರ್ ಭರವಸೆ ನೀಡಿದರು. ತಾ.ಪಂ. ಸದಸ್ಯ ಶೇಷಗಿರಿ ಮತ್ತಿತರರು ಭಾಗವಹಿಸಿದ್ದರು. ವೈದ್ಯರು ಮತ್ತು ನಿವೇಶನಗಳ ಬಗ್ಗೆ ಸ್ಪಷ್ಟ ಭರವಸೆ ದೊರೆತ ಹಿನ್ನೆಲೆಯಲ್ಲಿ ಸಿ.ಪಿ.ಐ ತನ್ನ ಧರಣಿಯನ್ನು ಸ್ಥಗಿತಗೊಳಿಸಿತು. ಸಿ.ಪಿ.ಐ ಮುಖಂಡರಾದ ಗೋಪಾಲ ಶೆಟ್ಟಿ, ಲಕ್ಷ್ಮಣಾಚಾರ್ ಮತ್ತಿತರರು  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.