ADVERTISEMENT

ಸತ್ಯಕ್ಕೆ ಅನಂತ ಮುಖ : ಸಚ್ಚಿದಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 9:15 IST
Last Updated 11 ಮಾರ್ಚ್ 2011, 9:15 IST

ನರಸಿಂಹರಾಜಪುರ: ಸತ್ಯಕ್ಕೆ ಅನಂತ ಮುಖ ಗಳಿವೆ ಎಂಬುದನ್ನು ಎಲ್ಲಾ ಧರ್ಮದವರು ಒಪ್ಪಿಕೊಳ್ಳಬೇಕು. ದೇವರ ಕಾಣಲು ಬೇರೆ ಬೇರೆ ಧಾರ್ಮಿಕ ಮಾರ್ಗಗಳಿವೆ ಎಂದು ಹರಿಹರಪುರದ ಪ್ರಕಾಶ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.ಅವರು ಸೋಮವಾರ ಅಜಾದ್ ನೌ ಜವಾನ್ ಸಮಿತಿ ಹಾಗೂ ಕೇಂದ್ರ ಜಾಮೀಯ ಮಸೀದಿ ಆಶ್ರಯದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಜಗತ್ತಿನ ಆದಿ ಧರ್ಮ ಸನಾತನ ಧರ್ಮ ವಾಗಿದ್ದು, ಲಕ್ಷಾಂತರ ವರ್ಷಗಳಿಂದ ಮಾನವ ಸುಸಂಸ್ಕೃತನಾಗಿ ಬದುಕುತ್ತಿದ್ದ ಜಾತಿಗೆ ಮಹತ್ವ ಕೊಟ್ಟಿರಲಿಲ್ಲ. ಮಾನವನಲ್ಲಿರುವ ದುರ್ಗುಣ ಗಳನ್ನು ಕಡಿಮೆ ಮಾಡಿಕೊಂಡು ದೈವತ್ವ ಹೊಂದುವುದು ಧರ್ಮದ ಉದ್ದೇಶ ಎಂದರು.ಉಪನ್ಯಾಸಕ ಹೈದರಾಲಿ ನಿಜಾಮ್ ಮಾತನಾಡಿ, ಇಸ್ಲಾಂ ಧರ್ಮ ಭಯೋತ್ಪಾದನೆಯನ್ನು ಬೋಧಿಸುವುದಿಲ್ಲ, ಲವ್ ಜಿಹಾದ್ ಬೆಂಬಲಿಸುವುದಿಲ್ಲ. ಬಲತ್ಕಾರದಿಂದ ಮತಾಂತರಕ್ಕೆ ಇದರಲ್ಲಿ ಅವಕಾಶವಿಲ್ಲ .ರಾಷ್ಟ್ರಪ್ರೇಮ ಇಸ್ಲಾಂನ ಅಂಗವಾಗಿದ್ದು, ಅವರವರ ಧರ್ಮದ ತಿರುಳನ್ನು ಅರಿತು ಬಾಳಿದರೆ ಸಂಘರ್ಷಕ್ಕೆ ಅವಕಾಶವಿಲ್ಲ ಎಂದರು.

ಭದ್ರಾವತಿಯ ನಿಜಾಮುದ್ದೀನ್, ಆಜಾದ್ ಯುವಕ ಸಂಘದ ಅಧ್ಯಕ್ಷ ಸಯ್ಯದ್ ಸಿಗ್ಬತುಲ್ಲಾ, ಜಾಮಿಯಾ ಮಸೀದಿಯ ಮೌಲಾನಾ ಸಯ್ಯದ್ ಷಾ ಮಹಮ್ಮದ್ ಇಬ್ರಾಹಿಂದ ಖಾದ್ರಿ,ಜಾಮಿಯಾ ಮಸೀದಿ ಅಧ್ಯಕ್ಷ ಎಸ್.ಎಂ.ಆಬಿದ್‌ಸಾಹಬ್,ಅಲ್ ನೂರ್ ಮಸೀದಿ ಅಧ್ಯಕ್ಷಗೌಸ್‌ಪಾಶಾ ಸಾಹಬ್, ನೂರುಲ್‌ಹುದಾ ಅರೇಬಿಕ್ ಮದರಸದ ಅಧ್ಯಕ್ಷ ಅಹಮ್ಮದ್, ಮುಸ್ಲಿಂ ಲೀಗ್ ಉಪಾಧ್ಯಕ್ಷ ಅಬ್ಧುಲ್

ರಹೀಂ ಸಾಹಬ್, ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಸಿ.ದಿವಾಕರ್, ಕ್ರಿಶ್ಚಿಯನ್ ಅಸೋ ಸಿಯೇಶನ್ ಅಧ್ಯಕ್ಷ ಇ.ಸಿ.ಸೇವಿ ಯಾರ್, ನಾರಾಯಣ ಗುರು ಸಮಾಜದ ನಾರಾಯಣ ಪೂಜಾರಿ, ಬ್ರಾಹ್ಮಣ ಸಮಾಜದ ಅಧ್ಯಕ್ಷ ಗುರುಮೂರ್ತಿ, ವೀರಶೈವ ಸಮಾಜದ ಎಚ್.ಎನ್.ಚಂದ್ರಶೇಖರ್, ಶಾಫಿ ಜಾಮಿಯಾ ಮಸೀದಿ ಕಮಿಟಿ ಅಧ್ಯಕ್ಷಸಿ.ಎಂ.ಸಾಧಿಕ್,ಆರ್ಯವೈಶ್ಯ ಸಮಾಜದ ಗೌರವಾಧ್ಯಕ್ಷ ರಾಜಗೋಪಾಶ್ರೇಷ್ಠಿ ,ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಮೃತ್ಯುಂಜಯ  ಮಾತನಾಡಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.