ADVERTISEMENT

ಸಮಸ್ಯೆಗೆ ಸ್ಪಂದಿಸುವ ಪ್ರತಿನಿಧಿ ಆರಿಸಿ: ರವಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 9:42 IST
Last Updated 26 ಏಪ್ರಿಲ್ 2013, 9:42 IST

ಚಿಕ್ಕಮಗಳೂರು: ವಿಧಾನಸೌಧದಲ್ಲಿ ಮೇಜು ತಟ್ಟಿ ಊರಿನ ಅಭಿವೃದ್ಧಿ ಮತ್ತು ಸಾಮಾನ್ಯ ಜನರ ಸಮಸ್ಯೆಗೆ ಸಮರ್ಥವಾಗಿ ಸ್ಪಂದಿಸುವ ಅಭ್ಯರ್ಥಿಗೆ ಮತ ನೀಡಿ ಎಂದು ಬಿಜೆಪಿ ಅಭ್ಯರ್ಥಿ  ಸಿ.ಟಿ.ರವಿ ಮನವಿ ಮಾಡಿದರು.

ನಗರದ ಹಿರೇಮಗಳೂರು, ಲಕ್ಷ್ಮೀಪುರ, ಶಂಕರಪುರ, ಪಂಪಾ ನಗರ, ತಮಿಳು ಕಾಲೋನಿ, ಷರೀಷ್ ಗಲ್ಲಿಯಲ್ಲಿ ಮತ ಯಾಚಿಸಿ ಮಾತ ನಾಡಿದರು.
5 ದಶಕಗಳಿಂದ ಕಾಣದ ಅಭಿವೃದ್ಧಿಯನ್ನು ಒಂದೇ ಅವಧಿಯಲ್ಲಿ ಕಾರ್ಯಗತಗೊಳಿಸಿ ಮತಯಾಚನೆಗೆ ಜನರ ಬಳಿ ಬಂದಿದ್ದೇನೆ. ರೈಲ್ವೆ ಯೋಜನೆ ಕನಸು ನನಸು ಮಾಡಿ, ಯುಜಿಡಿ, ರಸ್ತೆ ಸೇರಿದಂತೆ ಶಿಕ್ಷಣದ ಹಲವು ಮಹತ್ತರ ಯೋಜನೆ ತಂದಿದ್ದೇನೆ. ವ್ಯಕ್ತಿಗತ ಟೀಕೆ ಮಾಡುವ ಪ್ರವೃತ್ತಿ ನನ್ನದಲ್ಲ.

ಬೇನಾಮಿ ಹೆಸರಿನಲ್ಲಿ ಗುತ್ತಿಗೆ ಕೆಲಸ ಮಾಡುತ್ತಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ನಾನು ಶಾಸಕನಾಗಿದ್ದಾಗ 6 ವರ್ಷಗಳ ಕಾಲ ಮರ್ಲೆ, ಅಂಬಳೆ ರಸ್ತೆ, ಹೆಜ್ಜಗೇನಹಳ್ಳಿ ರಸ್ತೆ ಸೇರಿದಂತೆ ಹಲವು ಪ್ರದೇಶದ ರಸ್ತೆಗಳನ್ನು ಗುತ್ತಿಗೆ ಮಾಡಿದ್ದು ತಾವೆ ಎಂಬುದನ್ನು ಶಾಂತೇಗೌಡರು ಜನರಿಗೆ ತಿಳಿಸಬೇಕು. ಆ ಕಾಮಗಾರಿಗಳು ಕಳಪೆಯಾಗಿದ್ದರೆ ಅದಕ್ಕೆ ಅವರೇ ಹೊಣೆ ಎಂಬುದನ್ನು ಮರೆಯ ಬಾರದು. ಆರೋಪ ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದರು.

ಹಿರೇಮಗಳೂರು ಜಗದೀಶ್, ನಗರಸಭೆ ಸದಸ್ಯ ಎಚ್.ಡಿ.ತಮ್ಮಯ್ಯ, ಮಾಜಿ ಸದಸ್ಯ ಎಚ್.ಜೆ.ಜಾನಯ್ಯ, ಮುಖಂಡರಾದ ಸಿ.ಎಸ್.ರಂಗನಾಥ್, ವರಸಿದ್ದಿ ವೇಣುಗೋಪಾಲ್, ಸಿಡಿಎ ಸದಸ್ಯ ಮಂಜುನಾಥ್, ರೇವನಾಥ್, ಆಟೋ ರಾಜು, ಮೋಹನ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT